ಹೊಸದಿಲ್ಲಿ: ದೇಶಾದ್ಯಂತ ಜಾರಿಯಲ್ಲಿರುವ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ರಿಟರ್ನ್ಸ್ ಸಲ್ಲಿಕೆ ಅಂತಿಮ ದಿನಾಂಕವನ್ನು ಐದು ದಿನಗಳ ಕಾಲ(ಆಗಸ್ಟ್ 25 ರ ವರೆಗೆ) ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ಜಾಲತಾಣದಲ್ಲಿನ ತಾಂತ್ರಿಕ ದೋಷದ ನಿಮಿತ್ತ ಈ ವಿಸ್ತರಣೆ ಮಾಡಲಾಗಿದೆ.
ಈ ಹಿಂದಿನ ಸೂಚನೆಯಂತೆ ವ್ಯಾಪಾರಸ್ಥರು ಜುಲೈ ತಿಂಗಳ ರಿಟರ್ನ್ಸ್ ಸಲ್ಲಿಕೆಗೆ ಆಗಸ್ಟ್ 20 ಕಡೆಯ ದಿನವಾಗಿತ್ತು. ಆದರೆ www.gst.gov.in ವೆಬ್ ಸೈಟಿನಲ್ಲಿ ಉಂಟಾದ ತಾಂತ್ರಿಕ ದೋಷಗಳಿಂದ ವ್ಯಾಪಾರಿಗಳಿಗೆ ಸಸ್ರಿಯಾದ ಸಮಯದಲ್ಲಿ ರಿಟರ್ನ್ಸ್ ಫೈಲ್ ಮಾಡಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಸರ್ಕಾರ ಮತ್ತೆ ಐದು ದಿನಗಳ ಕಾಲಾವಕಾಶ ಒದಗಿಸಿದೆ.
ನಿವಾರದಂದು ರಾಜ್ಯ ಹಾಗೂ ಕೇಂದ್ರ ಅಧಿಕಾರಿಗಳನ್ನ ಒಳಗೊಂಡಿರುವ ಜಿಎಸ್ ಟಿ ಅನುಷ್ಠಾನ ಸಮಿತಿ ಸಭೆ ನಡೆಸಿದ್ದು ಜುಲೈ ತಿಂಗಳ ರಿಟರ್ನ್ಸ್ ಅನ್ನು ಸಲ್ಲಿಸುವ ಅಂತಿಮ ದಿನಾಂಕವನ್ನು ಆಗಸ್ಟ್ 25 ಕ್ಕೆ ಮುಂದೂಡಲಾಗಿದೆ ಎಂದು ಹಣಕಾಸು ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಪ್ರವಾಹ ಪೀಡಿತ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ ರಿಟರ್ನ್ಸ್‌ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಕೋರಿವೆ.