ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ
ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಬುಧವಾರ ಹೂಡಿಕೆದಾರರೊಂದಿಗೆ ಕಾನ್ಫ್ಹರೆನ್ಸ್ ಕಾಲ್ ಸಂವಹನ ನಡೆಸುವ ಮೂಲಕ ತನ್ನ ಸಂಸ್ಥೆಯಲ್ಲಾದ ಪ್ರಮುಖ ಬೆಳವಣಿಗೆಗಳ ಕುರಿತಂತೆ ತಿಳಿಸುವರು೭. ಇನ್ಫೋಸಿಸ್ ಸಿಇಓ ವಿಶಾಲ್ ಸಿಕ್ಕಾ ಕಳೆದ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದರು.
"ಮೂರ್ತಿ ಬುಧವಾರ ಸಂಜೆ 6.30 ಗಂಟೆಗೆ ತಾವು ನಡೆಸುತ್ತಿರುವ ಮಾಡುತ್ತಿರುವ ಕಾನ್ಫರೆನ್ಸ್ ಮೂಲಕ ಜಾಗತಿಕ ಹೂಡಿಕೆದಾರರೊಂದಿಗೆ ಮಾತನಾಡುತ್ತೇನೆ" ಎಂದು ಇಂಡಿಯನ್ ಆರ್ಮ್ ಆಫ್ ಗ್ಲೋಬಲ್; ಅಸೆಟ್ ಮ್ಯಾನೆಜ್ ಮೆಂಟ್ ಗ್ರೂಪ್ ಇನ್ವೆಸ್ಟಿಕ್ ಮಂಗಳವಾರ ರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ.
ಬ್ರಿಟನ್, ಹಾಂಗ್ ಕಾಂಗ್, ಭಾರತ, ಸಿಂಗಾಪುರ್ ಮತ್ತು ಅಮೆರ್ಕಾದ ಹೂಡಿಕೆದಾರರ ಜೊತೆ ತಾವು ಹೊಸದಾಗಿ ನೊಂದಾಯಿಸಿಕೊಳ್ಳುವ ಮೂಲಕ ಮತ್ತು ಕೊಟ್ಟಿರುವ ಸಂಖ್ಯೆಗಳನ್ನು ಡಯಲ್ ಮಾಡುವ ಮೂಲಕ ಕಾನ್ ಕಾನ್ಫರೆನ್ಸ್ ಗೆ ಸೇರಬಹುದು.
ನಿಮ್ಮ ನಿರಂತರ ಒತ್ತಡವೆ ಸಿಕ್ಕಾ ಅವರ ನಿರ್ಗಮನಕ್ಕೆ ಕಾರಣವಾಗಿದೆಯೆಂದು ಸಂಸ್ಥೆಯ ಆಡಳಿತ ಮಂಡಳಿಯ ವಿರುದ್ದದ ಸಿಕ್ಕಾ ಆರೋಪಕ್ಕೆ ಪ್ರತಿಕ್ರಿಯಿಸಲು ಮೂರ್ತಿ ನಿರಾಕರಿಸಿದರೂ, ಐಟಿ ಹೂಡಿಕೆದಾರರ ವಿಶ್ವಾಸವನ್ನು ಪುನಃ ಸ್ಥಾಪಿಸಲು ಅವರು ತನ್ನ ನಿಲುವನ್ನು ಸ್ಪಷ್ಟಪಡಿಸಲು ನಿರ್ಧರಿಸಿದ್ದಾರೆ.
"ಇನ್ಫೋಸಿಸ್ ಮಂಡಳಿಯ ನಿರ್ದೇಶಕರು ನೀಡಿದ ಹೇಳಿಕೆಯನ್ನು ನಾನು ಓದಿದ್ದೇನೆ, ಆಪಾದನೆಗಳು, ಮತ್ತು ಅದರ ಹೇಳಿಕೆಗಳಿಂದ ನಾನು ದುಃಖಿತನಾಗಿದ್ದೇನೆ" ಎಂದು ಮೂರ್ತಿ ಮಾಧ್ಯಮಕ್ಕೆ ತಿಳಿಸಿದ್ದಾರೆ.