ಸ್ಯಾನ್ ಫ್ರಾನ್ಸಿಸ್ಕೊ: ಉಬೆರ್ ಟೆಕ್ನಾಲಜೀಸ್ ಇಂಕ್ ಹೊಸ ಮುಖ್ಯ ಕಾರ್ಯನಿರ್ವಾಹಕ (ಸಿಇಓ) ಆಗಿ ದಾರಾ ಖೊರೋಶಾಶಿ ನೇಮಕವಾಗಿದ್ದಾರೆ. 12 ವರ್ಷಗಳ ಕಾಲ ಆನ್ ಲೈನ್ ಟ್ರಾವೆಲ್ ಉದ್ಯಮ ಎಕ್ಸ್ಪೀಡಿಯಾ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಮಂಡಳಿಯು ಈಗಾಗಲೇ ಉಬರ್ ನ ಮುಂದಿನ ಸಿಇಓ ಆಗಿ ಖೋಸ್ರೋಶಾಹಿ ಅವರನ್ನು ಭಾನುವಾರ ಮತದಾನದಲ್ಲಿ ಆಯ್ಕೆ ಮಾಡಿತ್ತು, ಆದರೆ ಮಂಗಳವಾರದ ಸಭೆಯವರೆಗೂ ತನ್ನ ನಿರ್ಣಯವನ್ನು ಸಂಸ್ಥೆ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ.
ಉಬರ್ ತನ್ನ ಹಿಂದಿನ ಸಿಇಒ ಟ್ರಾವಿಸ್ ಕಲಾನಿಕ್ ನ್ನು ಸಂಸ್ಥೆಯಿಂದ ಹೊರಹಾಕುವಲ್ಲಿ ಉಂಟಾದ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ಖೋಸ್ರೋಶಾಹಿ ಅವರ ನೇಮಕಾತಿಯು ಆಗಿರುವುದು ವಿಶೇಷ.
"ಉಬರ್ ನ್ನು ಭವಿಷ್ಯದಲ್ಲಿ ಮುನ್ನಡೆಸುವ ಅತ್ಯುತ್ತಮ ವ್ಯಕ್ತಿ ದಾರ ಖೊಸೊರೋಶಿ ಎಂದು ವಿಶ್ವಾಸವಿದೆ," ಎಂದು ಉಬರ್ ನ ಎಂಟು ಸದಸ್ಯರ ಮಂಡಳಿ ನೌಕರರಿಗೆ ಸಾರ್ವಜನಿಕ ಈ ಮೇಲ್ ನಲ್ಲಿ ಪ್ರಕಟಿಸಿದೆ.
"ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ" ಎಂದು ಅವರು ತಮ್ಮ ಮಾಜಿ ಸಂಸ್ಥೆ ಎಕ್ಪಿಡಿಯಾ ನೌಕರ ಮಿತ್ರರಿಗೆ ಕಳಿಸಿದ್ದ ಈ ಮೇಲ್ ನಲ್ಲಿ ಹೇಳಿದ್ದಾರೆ. ಅವರ ಅಧಿಕಾರಾವಧಿಯಲ್ಲಿ, ಎಕ್ಸ್ಪೀಡಿಯಾವನ್ನು ಆನ್ ಲೈನ್ ಬುಕಿಂಗ್ ಮೂಲಕ ಅತಿದೊಡ್ಡ ಆನ್ ಲೈನ್ ಟ್ರಾವೆಲ್ ಏಜೆನ್ಸಿಯಾಗಿ ನಿರ್ಮಿಸಿದ್ದರು.
ಇರಾನಿನ ವಲಸೆಗಾರರಾಗಿರುವ ಖೊರೊವ್ಶಾಹಿ, 1978 ರಲ್ಲಿ ಇರಾನ್ ಕ್ರಾಂತಿಯ ಸಮಯದಲ್ಲಿ ಅವರ ಪೋಷಕರೊಂದಿಗೆ ಅಮೆರಿಕಾಗೆ ಬಂದರು. ಅವರು ಸ್ನೇಹ ಮತ್ತು ಸ್ಥಿರತೆಯುಳ್ಳ ಬುದ್ಧಿವಂತ ಉದ್ಯಮಿ ಆಗಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos