ನವದೆಹಲಿ: ನೋಟು ನಿಷೇಧ, ಜಿಎಸ್ ಟಿ ಜಾರಿಯಿಂದ ಕುಸಿದಿದ್ದ ಜಿಡಿಪಿ ದರ 2018 ರಲ್ಲಿ ಪುಟಿದೇಳುವ ಸಾಧ್ಯತೆ ಇದೆ. ಆದರೆ ಜಿಡಿಪಿ ಏರಿಕೆಯ ಸಂತಸಕ್ಕೆ ಹಣದುಬ್ಬರ ಹಾಗೂ ಏರಿಕೆಯಾಗುತ್ತಿರುವ ತೈಲ ದರಗಳು ಅಡ್ಡಿಯಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
2017 ರಲ್ಲಿ ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯಿಂದ ಜಿಡಿಪಿ ಏರಿಕೆ ಕುಂಠಿತವಾಗಿತ್ತು, ಈ ವರ್ಷದಲ್ಲಿ ಜಿಡಿಪಿ ಚೇತರಿಕೆಯಾಗುವ ಲಕ್ಷಣಗಳಿವೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಶೇ.7.5 ರಷ್ಟಾಗುವ ಸಾಧ್ಯತೆ ಇದೆ. ಆದರೆ ತೈಲ ದರ ಯಾವ ರೀತಿಯಲ್ಲಿ ಏರುಪೇರಾಗುತ್ತದೆ ಎಂಬುದು ಮುಖ್ಯವಾಗಲಿದ್ದು, ಕಳೆದ 3 ತಿಂಗಳಲ್ಲಿ ಶೇ.28 ರಷ್ಟು ಏರಿಕೆಯಾಗಲಿದೆ. ಇದೇ ವೇಳೆ ಹಣದುಬ್ಬರವೂ ಜಿಡಿಪಿ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಜಿಡಿಪಿ ಏರಿಕೆಯಾಗುವ ಸಾಧ್ಯತೆಯ ಸಂತಸದ ವಿಷಯಕ್ಕೂ ಹಣದುಬ್ಬರ, ತೈಲ ದರ ಏರಿಕೆ ಅಂಶಗಳು ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.