ಸಾಂದರ್ಭಿಕ ಚಿತ್ರ 
ವಾಣಿಜ್ಯ

ಫೆಬ್ರವರಿ 20ರಿಂದ ಉಳಿತಾಯ ಖಾತೆಯಿಂದ ವಾರಕ್ಕೆ ವಿತ್ ಡ್ರಾ ಮಿತಿ 50,000ಕ್ಕೆ ವಿಸ್ತರಣೆ, ಮಾರ್ಚ್ 13 ಕ್ಕೆ ಕೊನೆ

ಸಾಮಾನ್ಯ ಜನರಿಗೆ ಕೊನೆಗೂ ಅನುಕೂಲ ಮಾಡಿಕೊಟ್ಟಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ...

ನವದೆಹಲಿ: ಸಾಮಾನ್ಯ ಜನರಿಗೆ ಕೊನೆಗೂ ಅನುಕೂಲ ಮಾಡಿಕೊಟ್ಟಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಮಾರ್ಚ್ 13ರಿಂದ ಉಳಿತಾಯ ಖಾತೆಯಿಂದ ನಗದು ಹಿಂಪಡೆಯಲು ಯಾವುದೇ ಮಿತಿಯಿಲ್ಲ ಎಂದು ಹೇಳಿದೆ. ಫೆಬ್ರವರಿ 20ರ ನಂತರ ವಾರಕ್ಕೆ ಪ್ರಸ್ತುತ ಇರುವ 24,000 ರೂಪಾಯಿ ಹಿಂಪಡೆಯುವ ಮಿತಿಯನ್ನು 50,000ಕ್ಕೆ ವಿಸ್ತರಿಸಲಾಗಿದೆ.
ಆರ್ ಬಿಐ ತನ್ನ ಹಣಕಾಸು ವರ್ಷದ ಮೊದಲ ಎರಡು ತಿಂಗಳ ವಿತ್ತೀಯ ನೀತಿಯನ್ನು ಇಂದು ಪ್ರಕಟಿಸಿದ್ದು, ಬಡ್ಡಿದರದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ನೇತೃತ್ವದ 6 ಸದಸ್ಯರನ್ನೊಳಗೊಂಡ ಹಣಕಾಸು ನೀತಿ ಸಮಿತಿ, ರೆಪೊ ಹಾಗೂ ರಿವರ್ಸ್ ರೆಪೊ ದರ ಬದಲಾಯಿಸದೆ ಶೇಕಡಾ 6.25 ಮತ್ತು ರಿವರ್ಸ್ ರೆಪೊ ದರವನ್ನು ಶೇಕಡಾ 5.75ರಷ್ಟು ಕಾಯ್ದುಕೊಂಡಿದೆ.
ಹಳೆಯ 500 ಮತ್ತು 1000ದ ನೋಟುಗಳ ಬಳಕೆ ನಿಷೇಧಿಸಿದ ನಂತರ ಆರ್ ಬಿಐ ಪ್ರಕಟಿಸುತ್ತಿರುವ ಎರಡನೇ ವಿತ್ತೀಯ ನೀತಿಯಾಗಿದೆ. 
ನವೆಂಬರ್ 8ರಂದು ಹಳೆಯ 500 ಮತ್ತು 1000ದ ನೋಟುಗಳ ಚಲಾವಣೆಯನ್ನು ರದ್ದು ಮಾಡಿದ ನಂತರ ಎಟಿಎಂ ಮತ್ತು ಬ್ಯಾಂಕ್ ನಲ್ಲಿ ಉಳಿತಾಯ ಖಾತೆಗಳಿಂದ ಹಣ ವಿತ್ ಡ್ರಾ ಮಾಡಲು ಮಿತಿ ಹೇರಲಾಗಿತ್ತು. ಹಳೆಯ 500 ಮತ್ತು 1000ದ ನೋಟುಗಳನ್ನು ಬ್ಯಾಂಕುಗಳಿಗೆ ಜಮಾ ಮಾಡಲು ಡಿಸೆಂಬರ್ ವರೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ತೆರಿಗೆ ವಂಚನೆಯಿಂದ ತಪ್ಪಿಸಲು ಎರಡೂವರೆ ಲಕ್ಷಕ್ಕೂ ಅಧಿಕ ಹಣ ಠೇವಣಿಯಿಟ್ಟವರ ಖಾತೆಗಳನ್ನು ಪರೀಕ್ಷಿಸಲಾಗುತ್ತಿತ್ತು. 
ಉಳಿತಾಯ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಎರಡು ಹಂತಗಳಲ್ಲಿ ಮಾಡಲಾಗುವುದು. ಮೊದಲನೆಯದಾಗಿ ಫೆಬ್ರವರಿ 20ರಿಂದ ವಿತ್ ಡ್ರಾ ಮಿತಿ ವಾರಕ್ಕೆ 24,000ದಿಂದ 50,000ಕ್ಕೆ ಹೆಚ್ಚಿಸಲಾಗುತ್ತದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ತಿಳಿಸಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 8ರಂದು ನೋಟು ನಿಷೇಧದ ನಂತರ ದೇಶದಲ್ಲಿ ಹೊಸ 500 ಮತ್ತು 2000ದ ನೋಟುಗಳು ಸೇರಿ ಜನವರಿ 27 ಕ್ಕೆ ಒಟ್ಟು 9.92 ಲಕ್ಷ ಕೋಟಿ ರೂಪಾಯಿ ಕರೆನ್ಸಿ ಚಲಾವಣೆಯಲ್ಲಿದ್ದವು ಎಂದು ಹೇಳಿದ್ದಾರೆ.
ಬ್ಯಾಂಕಿಂಗ್ ವಲಯದಲ್ಲಿ ಅನುತ್ಪಾದಕ ಆಸ್ತಿಗಳ ಮೌಲ್ಯವನ್ನು ಶೀಘ್ರವಾಗಿ ಮತ್ತು ದಕ್ಷತೆಯಿಂದ ಬಗೆಹರಿಸಿದರೆ ನೀತಿ ದರಗಳು ಸಕಾಲದಲ್ಲಿ ಪ್ರಸರಣವಾಗಿ ಬ್ಯಾಂಕು ನೀಡುವ ಸಾಲದ ಮೊತ್ತ ಮುಂದಿನ ದಿನಗಳಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಭಾರತದ ಬ್ಯಾಂಕಿಂಗ್ ವ್ಯವಸ್ಥೆ ದೃಢವಾಗಿದ್ದು ಕೆಲ ತಪ್ಪು ಘಟನೆಗಳಿಂದಾಗಿ ನ್ಯೂನತೆಗಳಿವೆ ಎಂದರು.

ಹೊಸ 2000 ಮತ್ತು 500ರ ನೋಟುಗಳು ನಕಲು ಮಾಡಲು ಕಷ್ಟ, ಅದರ ಛಾಯಾಪ್ರತಿ ಸಿಗಬಹುದಷ್ಟೆ ಎಂದು ಹೇಳಿದರು.

2016-17ನೇ ಸಾಲಿನ ಹಣಕಾಸು ವರ್ಷದ ಕೊನೆ ಮಾರ್ಚ್ ತಿಂಗಳಿನಲ್ಲಿ ಶೇಕಡಾ 6.9 ಬೆಳವಣಿಗೆಯ ನಿರೀಕ್ಷೆಯಿದೆ ಎಂದು ಅವರು ಹೇಳಿದರು.ನಿಯಮಗಳ ಜಾರಿಗೆ ಪ್ರತ್ಯೇಕ ಜಾರಿ ಇಲಾಖೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT