ವಾಣಿಜ್ಯ

ಸಾಲದ ದರಗಳನ್ನು ಕಡಿತಗೊಳಿಸಲು ಆರ್ ಬಿಐ ಬ್ಯಾಂಕುಗಳಿಗೆ ಸೂಚನೆ

Sumana Upadhyaya
ನವದೆಹಲಿ: ಕಡಿಮೆ ಬಡ್ಡಿ ಮೊತ್ತದ ಪ್ರಯೋಜನಗಳನ್ನು ಬ್ಯಾಂಕುಗಳು ಗ್ರಾಹಕರಿಗೆ ನೀಡಬೇಕು ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.
ಹಣಕಾಸು ಸಚಿವ ಅರುಣ್ ಜೇಟ್ಲಿಯವರೊಂದಿಗೆ ಬಜೆಟ್ ನಂತರದ ಆರ್ ಬಿಐ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಆರ್ ಬಿಐಯ ಯೋಜನೆಗಳ ದರದ ಕಡಿತದಿಂದ ಬ್ಯಾಂಕುಗಳಿಗೆ ಪ್ರಯೋಜನವಾಗಿದೆ. ಕಳೆದ ನವೆಂಬರ್-ಡಿಸೆಂಬರ್ ನಲ್ಲಿ ಚಾಲ್ತಿ ಮತ್ತು ಉಳಿತಾಯ ಖಾತೆಗಳಿಗೆ ಕಡಿಮೆ ವೆಚ್ಚದ ಠೇವಣಿಗಳ ಒಳಹರಿವು ಹೆಚ್ಚಾಗಿದೆ. ಸರಾಸರಿ ಸಾಲ ಪ್ರಮಾಣ ಕಡಿತ (ಬ್ಯಾಂಕುಗಳು) ಕಡಿಮೆ ಬಂದಿದೆ. ಗೃಹ ಸಾಲ, ವೈಯಕ್ತಿಕ ಸಾಲದಲ್ಲಿ ಮತ್ತಷ್ಟು ಕಡಿಮೆ ಮಾಡಲು ಬ್ಯಾಂಕುಗಳಿಗೆ ಸಾಧ್ಯತೆಯಿದೆ ಎಂದು ಹೇಳಿದರು.
ಸಾಲ ದರವನ್ನು ವ್ಯಾಪಾರ, ಉದ್ದಿಮೆಗಳಿಗೆ ಕೂಡ ವರ್ಗಾಯಿಸುವಂತೆ ಅವರು ಇದೇ ಸಂದರ್ಭದಲ್ಲಿ ಬ್ಯಾಂಕುಗಳಿಗೆ ಸಲಹೆ ನೀಡಿದರು.
SCROLL FOR NEXT