ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಲವು ನಡೆಗಳಿಂದ ದೇಶೀ ಐಟಿ ಕ್ಷೇತ್ರಕ್ಕೆ ಒಳ್ಳೆಯದೇ ಆಗಬಹುದು ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ನ ಮುಖ್ಯಸ್ಥ ಮುಖೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ವ್ಯಾಪಾರ ವಹಿವಾಟುಗಳಿಗೆ ನಾವು ಮುಕ್ತವಾಗಿರಬೇಕು, ಹಾಗೆಯೇ ಗೋಡೆಗಳನ್ನು ನಿರ್ಮಿಸುವಂತಹ ಜಾಗತಿಕ ಬದಲಾವಣೆಯಿಂದ ಪ್ರಭಾವಿತರಾಗಬಾರದು ಎಂದು ಅಂಬಾನಿ ಹೇಳಿದ್ದಾರೆ. ನಾಸ್ಕಾಮ್ ಲೀಡರ್ ಶಿಪ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಆರ್ ಐಎಲ್ ಅಧ್ಯಕ್ಷ ಮುಖೇಶ್ ಅಂಬಾನಿ, ತಂತ್ರಜ್ಞಾನ ನಮ್ಮ ಜೀವನ ಶೈಲಿಗೆ ಹೊಂದಾಣಿಕೆಯಾಗುವಂತೆ ಇರಬೇಕು ಎಂದು ಹೇಳಿದ್ದಾರೆ.
ಇನ್ನು 20 ವರ್ಷಗಳಲ್ಲಿ ಮಾನವ ಕಳೆದ 300 ವರ್ಷಗಳಲ್ಲಿ ಆಗಿರುವ ಸಾಧನೆಗಳಿಗೂ ಹೆಚ್ಚು ಸಾಧನೆಗಳನ್ನು ಮಾಡಲಿದ್ದಾನೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.