ಮುಂಬೈ: ಭಾರತದ ವಾಣಿಜ್ಯ ನಗರಿ ಮುಂಬೈ 820 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದು, ದೇಶದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಶ್ವ ಸಂಪತ್ತಿನ ಇತ್ತೀಚಿನ ವರದಿಯ ಪ್ರಕಾರ, ಅನೇಕ ಮಿಲೆನಿಯರ್ ಗಳು ಬಿಲೆನಿಯರ್ ಗಳ ವಾಸಸ್ಥಾನವಾಗಿರುವ ಮುಂಬೈನ ನಂತರದ ಸ್ಥಾನದಲ್ಲಿ ದೆಹಲಿ ಇದ್ದು, ರಾಜ್ಯ ರಾಜಧಾನಿ ಬೆಂಗಳೂರು 3 ನೇ ಸ್ಥಾನದಲ್ಲಿದೆ.
ದೆಹಲಿ ಒಟ್ಟು 450 ಬಿಲಿಯನ್ ಡಾಲರ್, ಬೆಂಗಳೂರು 320 ಬಿಲಿಯನ್ ಡಾಲರ್ ಗಳಷ್ಟು ಸಂಪತ್ತು ಹೊಂದಿದ್ದು, ನಾಲ್ಕನೇ ಸ್ಥಾನದಲ್ಲಿ 310 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಹೈದರಾಬಾದ್ ಇದ್ದರೆ 180 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ಪುಣೆ 5 ನೇ ಸ್ಥಾನ ಪಡೆದುಕೊಂಡಿದೆ. 2016 ನೇ ಸಾಲಿನಲ್ಲಿ ಭಾರತದ ಒಟ್ಟು ಸಂಪತ್ತು 6.2 ಟ್ರಿಲಿಯನ್ ಡಲಾರ್ ನಷ್ಟಿದೆ ಎಂದು ವಿಶ್ವ ಸಂಪತ್ತಿಗೆ ಸಂಬಂಧಿಸಿದ ವರದಿಯೊಂದು ಹೇಳಿದೆ.