ಬೀಜಿಂಗ್: ಬ್ರಿಕ್ಸ್ ರಾಷ್ಟ್ರಗಳು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿವೆ ಬ್ರಿಕ್ಸ್ ಬ್ಯಾಂಕ್ ನ ಮೊದಲ ಅಧ್ಯಕ್ಷರಾದ ಕೆವಿ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿಯ ಬ್ರಿಕ್ಸ್ ನ ವಾರ್ಷಿಕ ಶೃಂಗಸಭೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯಲಿದ್ದು, ಪ್ರಸಕ್ತ ವರ್ಷದ ಚೀನಾ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಒಕ್ಕೂಟ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಕೆವಿ ಕಾಮತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರಿಯಾಮೆನ್ ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಇದುವರೆಗಿನ ಸಾಧನೆಯ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದ್ದು, ಕಾರ್ಯಸೂಚಿಗಳೂ ನಿರ್ಧಾರವಾಗಲಿದ್ದು, ಬ್ರಿಕ್ಸ್ ರಾಷ್ಟ್ರಗಳು ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಸಮಯದಲ್ಲಿ ಶೃಂಗಸಭೆ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ ಎಂದು ಕೆವಿ ಕಾಮತ್ ಹೇಳಿದ್ದಾರೆ.
ಬ್ರಿಕ್ಸ್ ಬ್ಯಾಂಕ್ (ಬ್ರಿಕ್ಸ್ ರಾಷ್ಟ್ರಗಳ ನೂತನ ಅಭಿವೃದ್ಧಿ ಬ್ಯಾಂಕ್)ನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಥಾಪಿಸಿ ಕಾರ್ಯಾರಂಭ ಮಾಡುವುದಕ್ಕೆ ಚೀನಾ ಹೆಚ್ಚಿನ ಸಹಕಾರ ನೀಡಿದೆ. ಚೀನಾದ ಸಹಕಾರ ಇಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಕೆವಿ ಕಾಮತ್ ಹೇಳಿದ್ದಾರೆ.