ವಾಣಿಜ್ಯ

ಟ್ರಂಪ್ ನಿಂದ ತಳಮಳಗೊಳ್ಳದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ

Guruprasad Narayana
ವಾಷಿಂಗ್ಟನ್: ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಳ್ಲ ಅವರನ್ನು ತಳಮಳಿಸಗೊಳ್ಳಲು ಸಾಧ್ಯವಾಗಿಲ್ಲ ಮತ್ತು ಸಂಸ್ಥೆಯ ಉದ್ಯೋಗ ಸೃಷ್ಟಿಯ ಬಗ್ಗೆ ಅವರು ಭರವಸೆಯಿಂದಿದ್ದಾರೆ. 
"ನಾವು ಅಮೆರಿಕಾ ಮೂಲದ ಸಂಸ್ಥೆ ಮತ್ತು ಜಾಗತಿಕವಾಗಿ ಎಲ್ಲೆಡೆ ಕಾರ್ಯ ನಿರ್ವಹಿಸುತ್ತೇವೆ ಹಾಗು ಅತಿ ಹೆಚ್ಚು ಉದ್ಯೋಗ ಇರುವದು ಅಮೆರಿಕಾದಲ್ಲಿ" ಎಂದು ಭಾರತೀಯ-ಅಮೆರಿಕನ್ ನಾದೆಳ್ಲ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 
"ನಾವು ಈಗಾಗಲೇ ಅಮೆರಿಕಾದಲ್ಲಿ ಅತಿ ಹೆಚ್ಚು ವೇತನ ನೀಡುವ ಹೆಚ್ಚಿನ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ" ಎಂದು ಅವರು ಹೇಳಿದ್ದಾರೆ. 
ಮೈಕ್ರೋಸಾಫ್ಟ್ ಜಾಗತಿಕವಾಗಿ ೧,೧೩,೦೦೦ ಜನರಿಗೆ ಉದ್ಯೋಗ ನೀಡಿದೆ ಅದರಲ್ಲಿ ೬೪,೦೦೦ ಜನ ಅಮೆರಿಕಾದಲ್ಲಿದ್ದಾರೆ, ಹೆಚ್ಚು ವಾಷಿಂಗ್ಟನ್ ನಲ್ಲಿಯೇ ಎಂದು ಸಂಸ್ಥೆ ತಿಳಿಸಿದೆ.
ಟ್ರಂಪ್ ಅವರು ಅಧ್ಯಕ್ಷಗಾಥೆಯನ್ನು ಅಲಂಕರಿಸಿದ ಮೇಲೆ ಸಂಸ್ಥೆಯ ಕಾರ್ಯಚಟುವಟಿಕೆಗಳ ನೀಲಿನಕ್ಷೆ ಬದಲಾಗಿಲ್ಲ ಎಂದು ಕೂಡ ನಾದೆಳ್ಲ ತಿಳಿಸಿದ್ದಾರೆ.
"ಮುಂದೆ ನಾವು ಮಾಡಿರುವುದನ್ನೇ ದ್ವಿಗುಣಗೊಳಿಸಬಹುದು. ನಾವು ಅಮೆರಿಕಾದಿಂದ ಕಾರ್ಯ ನಿರ್ವಹಿಸುವ ಅಮೆರಿಕಾದ ಜವಾಬ್ದಾರಿಯುತ ಸಂಸ್ಥೆ ಆದರೆ ನಾವು ಬಹುರಾಷ್ಟ್ರೀಯ ಸಂಸ್ಥೆ ಕೂಡ ಮತ್ತು ನಾವು ಕೆಲಸ ಮಾಡುವ ದೇಶಗಳಿಗೆ ಕೊಡುಗೆ ನೀಡುತ್ತೇವೆ" ಎಂದು ಕೂಡ ಅವರು ಹೇಳಿದ್ದಾರೆ. 
ನವೆಂಬರ್ ೮ ರಂದು ಟ್ರಂಪ್ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದಾಗಲಿಂದಲೂ, ಅಲ್ಲಿನ ಸಂಸ್ಥೆಗಳು ಅಮೇರಿಕನ್ನರಿಗೆ ಹೆಚ್ಚು ಉದ್ಯೋಗ ನೀಡುವ ಮಾತುಗಳನ್ನಾಡುತ್ತಿದ್ದಾರೆ. 
ತಂತ್ರಜ್ಞಾನ ಸಂಸ್ಥೆಗಳು ಉದ್ಯೋಗ ಅವಕಾಶಗಳನ್ನು ಬೇರೆ ದೇಶಗಳಿಗೆ ಕಳುಹಿಸುತ್ತಿವೆ ಎಂದು ದೂರಿದ್ದ ಟ್ರಂಪ್ ಅವುಗಳನ್ನು ಹಿಂದಕ್ಕೆ ತರುವುದಾಗಿ ಅಧ್ಯಕ್ಷರಾಗಿ ಚುನಾಯಿತರಾದ ಮೇಲೆ ಘೋಷಿಸುತ್ತಲೇ ಬಂದಿದ್ದಾರೆ. 
SCROLL FOR NEXT