ಡಾ.ಹಮ್ಸುಕ್ ಆದಿಯಾ 
ವಾಣಿಜ್ಯ

ಜಿಎಸ್ ಟಿಯಿಂದ ಕ್ರೆಡಿಟ್ ಕಾರ್ಡಿಗೆ ಎರಡು ಪಟ್ಟು ತೆರಿಗೆ ಕಟ್ಟಬೇಕೆನ್ನುವ ಸಂದೇಶ ಶುದ್ಧ ಸುಳ್ಳು: ಡಾ.ಹಮ್ಸುಕ್ ಆದಿಯಾ

ಕ್ರೆಡಿಟ್ ಕಾರ್ಡುಗಳ ಮೂಲಕ ಹಣ ಪಾವತಿ ಮಾಡಿದರೆ ಎರಡು ಪಟ್ಟು ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ...

ನವದೆಹಲಿ: ಕ್ರೆಡಿಟ್ ಕಾರ್ಡುಗಳ ಮೂಲಕ ಹಣ ಪಾವತಿ ಮಾಡಿದರೆ ಎರಡು ಪಟ್ಟು ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ಸತ್ಯಕ್ಕೆ ದೂರವಾದುದು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಡಾ.ಹಮ್ಸುಕ್ ಆದಿಯಾ ತಿಳಿಸಿದ್ದಾರೆ. 
ಜನರು ಈ ರೀತಿಯ ಸಂದೇಶಗಳನ್ನು ಅಥವಾ ಜಿಎಸ್ ಟಿಗೆ ಸಂಬಂಧಪಟ್ಟ ಬೇರೆ ಯಾವುದೇ ಸಂದೇಶಗಳನ್ನು ಖಚಿತಪಡಿಸದೆ ಸಾಮಾಜಿಕ ಮಾಧ್ಯಮದಲ್ಲಿ ಹಬ್ಬಿಸಬಾರದೆಂದು ಅವರು ಒತ್ತಾಯಿಸಿದ್ದಾರೆ.
ಸರಕು ಮತ್ತು ಸೇವಾ ತೆರಿಗೆ ಪ್ರಾರಂಭಗೊಂಡ ನಂತರ ಅವರು ಟ್ವಿಟ್ಟರ್ ನಲ್ಲಿ ಈ ಹೇಳಿಕೆ ನೀಡಿದ್ದಾರೆ. 
ಕ್ರೆಡಿಟ್ ಕಾರ್ಡು ಬಳಸಿದರೆ ಶೇಕಡಾ 18ರಷ್ಟು ತೆರಿಗೆ ವಿಧಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ ನಿರ್ಧರಿಸಿದೆ. ಮುಂಚೆ ಶೇಕಡಾ 15ರಷ್ಟು ತೆರಿಗೆ ಪಾವತಿಸಬೇಕಾಗುತ್ತಿತ್ತು. ಜಿಎಸ್ ಟಿ ಬಂದ ನಂತರ ಶೇಕಡಾ 3ರಷ್ಟು ಹೆಚ್ಚಾಗಿದೆ.
ಸರಕು ಮತ್ತು ಸೇವಾ ತೆರಿಗೆ ಸಾಧ್ಯತೆ ಪ್ರಕಾರ, ಕ್ರೆಡಿಟ್ ಕಾರ್ಡುಗಳಲ್ಲದೆ ಇತರ ಹಣಕಾಸು ಸೇವೆಗಳಿಗೆ ಕೂಡ ಗ್ರಾಹಕರು ಹೆಚ್ಚು ತೆರಿಗೆ ಕಟ್ಟಬೇಕು. ಬ್ಯಾಂಕಿಂಗ್ ಸೇವೆಗಳು, ವಿಮಾ ಪ್ರೀಮಿಯಂ ಪಾವತಿ ಇತ್ಯಾದಿಗಳಿಗೆ ಕೂಡ ಶೇಕಡಾ 18ರಷ್ಟು ತೆರಿಗೆ ಪಾವತಿಸಬೇಕು.
ಬ್ಯಾಂಕಿಂಗ್ ಸೇವೆಗಳಲ್ಲಿ, ಗೃಹ ಸಾಲ ಪ್ರಕ್ರಿಯೆ ಶುಲ್ಕ, ಹಣ ವರ್ಗಾವಣೆ, ಡೆಬಿಟ್ ಕಾರ್ಡು, ಉಚಿತ ಸೇವೆಗಳಿಗಿಂತ ಜಾಸ್ತಿ ಬಾರಿ ಎಟಿಎಂಗಳನ್ನು ಹಣ ಪಡೆಯಲು ಬಳಸಿದರೆ, ಚೆಕ್ ವಿತರಣೆ, ಡ್ರಾಫ್ಟ್, ನಕಲಿ ಪಾಸ್ ಬುಕ್, ನಗದು ನಿರ್ವಹಣೆ ಶುಲ್ಕ ಮತ್ತು ಎಸ್ಎಂಎಸ್ ಗಳಿಗೆ ಜಿಎಸ್ ಟಿ ಬಂದ ಮೇಲೆ ತೆರಿಗೆ ಹೆಚ್ಚಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!