ಸಾಂದರ್ಭಿಕ ಚಿತ್ರ 
ವಾಣಿಜ್ಯ

ಅಮೆರಿಕಾದ ನಾರ್ಥ್ ಕೆರೊಲಿನಾದಲ್ಲಿ 2021ರ ವೇಳೆಗೆ 2,000 ಉದ್ಯೋಗ ಸೃಷ್ಟಿಸಲಿರುವ ಇನ್ಫೋಸಿಸ್

ಸ್ಥಳೀಯರಿಗೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಹೊರಗುತ್ತಿಗೆ ನೀಡುವ ಕ್ರಮಕ್ಕೆ....

ನವದೆಹಲಿ: ಸ್ಥಳೀಯರಿಗೆ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಹೊರಗುತ್ತಿಗೆ ನೀಡುವ ಕ್ರಮಕ್ಕೆ ಕಡಿವಾಣ ಹಾಕಲು ಡೊನಾಲ್ಡ್ ಟ್ರಂಪ್ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಅಮೆರಿಕಾದ ನಾರ್ಥ್ ಕೆರೊಲಿನಾ ರಾಜ್ಯದಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಸುಮಾರು 2,000 ತಾಂತ್ರಿಕ ಉದ್ಯೋಗಗಳನ್ನು ಸೃಷ್ಟಿಸಲು ಸಜ್ಜಾಗಿದೆ.
ಬೆಂಗಳೂರು ಮೂಲದ ಸಂಸ್ಥೆ ಇನ್ಫೋಸಿಸ್, ಮುಂದಿನ ಎರಡು ವರ್ಷಗಳಲ್ಲಿ ತನ್ನ ಅಮೆರಿಕಾದಲ್ಲಿರುವ ಕಂಪೆನಿಗೆ 10,000 ಮಂದಿ ಅಲ್ಲಿನ ನೌಕರರನ್ನು ನೇಮಿಸಿಕೊಳ್ಳುವುದಾಗಿ ಮೇ ತಿಂಗಳಲ್ಲಿ ಘೋಷಿಸಿತ್ತು. ಇನ್ಫೋಸಿಸ್ ಅಮೆರಿಕಾದ ಇಂಡಿಯಾನಾದಲ್ಲಿ ಮೊದಲ ಕೇಂದ್ರವನ್ನು ಸ್ಥಾಪಿಸಿ ಅಲ್ಲಿ 2021ರ ವೇಳೆಗೆ ಸುಮಾರು 2,000 ಮಂದಿ ಅಮೆರಿಕನ್ನರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲಿದೆ.
ಇನ್ನು  ಇತರ ಐಟಿ ಕಂಪೆನಿಗಳಾದ ವಿಪ್ರೊ ಮತ್ತು ಟಿಸಿಎಸ್ ಕೂಡ ಅಲ್ಲಿನ ಸ್ಥಳೀಯರನ್ನು ನೇಮಿಸಿಕೊಳ್ಳುವುದಾಗಿ ಹೇಳಿದೆ. ಮುಂದಿನ ಎರಡು ವರ್ಷಗಳಲ್ಲಿ ನಾರ್ಥ್ ಕೆರೊಲಿನಾ ರಾಜ್ಯದಲ್ಲಿ ಕಂಪೆನಿಯ 2,000 ಮಂದಿ ನೌಕರರಲ್ಲಿ ಸುಮಾರು 500 ಮಂದಿಯನ್ನು ಆರಂಭದಲ್ಲಿ ನೇಮಿಸಲಾಗುವುದು. ಉಳಿದವರನ್ನು ಹಂತಹಂತವಾಗಿ 2021ರ ವೇಳೆಗೆ ನೇಮಿಸಲಾಗುವುದು ಎಂದು ಹೇಳಿದೆ.
ಪ್ರತಿಷ್ಟಿತ ಕಾಲೇಜು, ವಿಶ್ವವಿದ್ಯಾಲಯಗಳು ಮತ್ತು ಸಮುದಾಯ ಕಾಲೇಜುಗಳಲ್ಲಿ ಅಧ್ಯಯನ ಮಾಡಿ ಹೊರಬಂದ ಪದವೀಧರರು ಮತ್ತು ಸ್ಥಳೀಯ ವೃತ್ತಿಪರರನ್ನು ನೇಮಿಸಲಾಗುವುದು ಎಂದು ಇನ್ಫೋಸಿಸ್ ತಿಳಿಸಿದೆ.
ಹೊಸದಾಗಿ ಕೆಲಸಕ್ಕೆ ಸೇರುವ ನೌಕರರಿಗೆ ವೃತ್ತಿ ನೈಪುಣ್ಯತೆಗೆ ತರಬೇತಿ ನೀಡಲು ನಾರ್ಥ್ ಕ್ಯಾರೊಲಿನಾ 3 ದಶಲಕ್ಷ ಅಮೆರಿಕನ್ ಡಾಲರ್ ಅನುದಾನ ನೀಡಲಿದೆ. ನಾರ್ಥ್ ಕೆರೊಲಿನಾದಲ್ಲಿ ಕಂಪೆನಿಯ ನಿಯಮಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ್ ಸಿಕ್ಕಾ ಹೇಳಿದ್ದಾರೆ.
ನಾರ್ಥ್ ಕೆರೊಲಿನಾ ತಂತ್ರಜ್ಞಾನ ಮತ್ತು ಸಂಶೋಧನೆ ಕೇಂದ್ರ, ಕೃತಕ ಗುಪ್ತಚರ, ಯಂತ್ರ ಕಲಿಕೆ, ಬಳಕೆದಾರರ ಅನುಭವ, ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನಗಳು, ಮೋಡ ಮತ್ತು ಬೃಹತ್ ಅಂಕಿಅಂಶಗಳ ಮೇಲೆ ಗಮನ ಹರಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT