ವಾಣಿಜ್ಯ

ಮೈಕ್ರೋಸಾಫ್ಟ್ ನಿಂದ ಸುಮಾರು 4 ಸಾವಿರ ಉದ್ಯೋಗ ಕಡಿತ

Lingaraj Badiger
ನ್ಯೂಯಾರ್ಕ್: ಮಾಹಿತಿ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ ತನ್ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ಪ್ರಮುಖ ಬದಲಾವಣೆಗೆ ಮುಂದಾಗಿದ್ದು, ಇದರ ಪರಿಣಾಮವಾಗಿ ಸುಮಾರು ನಾಲ್ಕು ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಅಮೆರಿಕದಿಂದ ಹೊರಗಿನ ಉದ್ಯೋಗಗಳಿಗೆ ಹೆಚ್ಚು ಕತ್ತರಿ ಬಿಳುವ ಸಾಧ್ಯತೆ ಇದೆ ಎನ್ನಲಾಗಿದೆ.
ತನ್ನ ಗ್ರಾಹಕರಿಗೆ ಮತ್ತು ಪಾಲುದಾರರಿಗೆ ಉತ್ತಮ ಸೇವೆ ನೀಡುವುದಕ್ಕಾಗಿ ಕಂಪನಿ ಕೆಲವೊಂದು ಬದಲಾವಣೆಗಳನ್ನು ತರುತ್ತಿದೆ. ಇದರಿಂದಾಗಿ ಕೆಲವರು ಉದ್ಯೋಗ ಕಳೆದುಕೊಳ್ಳಬಹುದು ಎಂದು ಮೈಕ್ರೋಸಾಫ್ಟ್ ಕಂಪನಿಯ ವಕ್ತಾರರು ಇಮೇಲ್ ಮೂಲಕ ತಿಳಿಸಿದ್ದಾರೆ.
ಕೆಲವು ಹುದ್ದೆಗಳನ್ನು ತೆಗೆದು ಹಾಕಲಾಗುವುದು ಎಂದು ಮೈಕ್ರೋಸಾಫ್ಟ್ ವಕ್ತಾರರು ಇಮೇಲ್ ಪ್ರಕಟಣೆಯ ಮೂಲಕ ಪಿಟಿಐಗೆ ತಿಳಿಸಿದ್ದಾರೆ. ಆದರೆ ಎಷ್ಟು ಉದ್ಯೋಗಗಳನ್ನು ಕಡಿತಗೊಳಿಸಲಾಗುತ್ತಿದೆ ಎಂಬುದುನ್ನು ಅವರು ಖಚಿತಪಡಿಸಿಲ್ಲ.
ಇತ್ತೀಚಿನ ವರ್ಷಗಳಲ್ಲಿ ಮೈಕ್ರೋಸಾಫ್ಟ್ ಸಾವಿರಗಟ್ಟಲೆ ಉದ್ಯೋಗಗಳನ್ನು ಕಡಿತಗೊಳಿಸಿತ್ತು. 2014 ರಲ್ಲಿ ಅತಿ ಹೆಚ್ಚು ಅಂದರೆ 18,000 ಉದ್ಯೋಗಗಳನ್ನು ಕಡಿತಗೊಳಿಸಿತ್ತು. 
SCROLL FOR NEXT