ಸಂಗ್ರಹ ಚಿತ್ರ 
ವಾಣಿಜ್ಯ

ಉತ್ಪಾದಕರು ಪರಿಷ್ಕೃತ ಎಂಆರ್​ಪಿ ಮುದ್ರಿಸದಿದ್ದರೆ ಜೈಲು ಶಿಕ್ಷೆ!

ಮಹತ್ವದ ಬೆಳವಣಿಗೆಯಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಉತ್ಪಾದಕರು ಪರಿಷ್ಕೃತ ಎಂಆರ್​ಪಿ ಮುದ್ರಿಸದಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿದುಬಂದಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಉತ್ಪಾದಕರು ಪರಿಷ್ಕೃತ ಎಂಆರ್​ಪಿ ಮುದ್ರಿಸದಿದ್ದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಜುಲೈ 1ರಿಂದ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಯಾಗಿದ್ದು, ಇದರ ಅನ್ವಯ ಹೊಸ ಗರಿಷ್ಠ ಮಾರಾಟ ದರವನ್ನು (ಎಂಆರ್​ಪಿ) ಉತ್ಪನ್ನಗಳ ಮೇಲೆ ಮುದ್ರಿಸದ ಉತ್ಪಾದಕರು ಇನ್ನು ಗರಿಷ್ಠ ಒಂದು ಲಕ್ಷ ರು. ದಂಡ ಸೇರಿದಂತೆ ಒಂದು  ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಈಗಾಗಲೇ ಗ್ರಾಹಕ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಜಿಎಸ್​ಟಿ ಲಾಭಗಳಿಂದ ಜನರನ್ನು ವಂಚಿಸುವಂತಿಲ್ಲ ಎಂದು ಉತ್ಪಾದಕರಿಗೆ ಎಚ್ಚರಿಕೆ ನೀಡಿದೆ.

ಒಂದು ವೇಳೆ ಉತ್ಪಾದಕರು ಜಿಎಸ್ ಟಿ ಲಾಭಗಳನ್ನು ಗ್ರಾಹಕರಿಗೆ ನೀಡದೇ ಹಳೆಯ ದರಗಳ ಎಂಆರ್ ಪಿಯನ್ನೇ ಮುದ್ರಿಸಿದ್ದರೆ ಪ್ಯಾಕೇಜ್ಡ್ ಕಮಾಡಿಟೀಸ್ ನಿಯಮದಡಿ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಗ್ರಾಹಕ ವ್ಯವಹಾರ  ಖಾತೆ ಸಚಿವ ರಾಮ್​ ವಿಲಾಸ್ ಪಾಸ್ವಾನ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. "ಮಾರಾಟವಾಗದ ವಸ್ತುಗಳ ಮೇಲೆ ಹೊಸ ಗರಿಷ್ಠ ಚಿಲ್ಲರೆ ದರವನ್ನು ನಮೂದಿಸಿ ಸೆಪ್ಟೆಂಬರ್ ಒಳಗೆ ಅವುಗಳನ್ನು ಮಾರಾಟ ಮಾಡುವಂತೆ  ಉತ್ಪಾದಕರಿಗೆ ಗಡುವು ವಿಧಿಸಲಾಗಿದೆ. ಜಿಎಸ್​ಟಿಗೆ ಸಂಬಂಧಿಸಿದಂತೆ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದಕ್ಕಾಗಿ ಸಮಿತಿಯನ್ನು ರಚಿಸಲಾಗಿದ್ದು, ಹಿಂದೆ ಇದ್ದ 14 ಸಹಾಯವಾಣಿಗಳ ಸಂಖ್ಯೆಯನ್ನು 60ಕ್ಕೆ ಹೆಚ್ಚಿಸಲಾಗಿದೆ.   ಸಹಾಯವಾಣಿಗಳಿಗೆ ಇದುವರೆಗೆ 700 ಮಂದಿ ಕರೆಮಾಡಿದ್ದು, ಅವರ ಪ್ರಶ್ನೆಗಳ ಪರಿಹಾರಕ್ಕಾಗಿ ತಜ್ಞರನ್ನು ಸಂರ್ಪಸಲಾಗಿದೆ" ಎಂದು ಪಾಸ್ವಾನ್ ತಿಳಿಸಿದರು.

ಜಿಎಸ್​ಟಿ ನಂತರದ ದಾಸ್ತಾನುಗಳ ದರವನ್ನು ಗ್ರಾಹಕರ ವ್ಯವಹಾರಗಳ ಸಚಿವಾಲಯಕ್ಕೆ ತಿಳಿಸುವುದರ ಜತೆಗೆ ಜಾಹೀರಾತುಗಳ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಎಂದು ಪಾಸ್ವಾನ್ ಸೂಚಿಸಿದ್ದಾರೆ.

ಹೊಸ ದರವನ್ನು ವಸ್ತುಗಳ ಮೇಲೆ ಮರುಮುದ್ರಣ ಅಥವಾ ಸ್ಟಿಕರ್​ರೂಪದಲ್ಲಿ ಅಂಟಿಸದಿದ್ದರೆ ಮೊದಲ ಬಾರಿ 25 ಸಾವಿರ ರು. ದಂಡ, ಎರಡನೇ ಬಾರಿಗೆ 50 ಸಾವಿರ ರು. ಮತ್ತು ಮೂರನೇ ಬಾರಿಗೆ 1 ಲಕ್ಷ ರು. ದಂಡ ಹಾಗೂ ಒಂದು  ವರ್ಷದ ವರೆಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ.

ದ್ವಿ ಬಗೆಯ ಎಂಆರ್​ಪಿ ನೀತಿ ರದ್ದು
ಏತನ್ಮಧ್ಯೆ ಮಹಾರಾಷ್ಟ್ರ ಕಾನೂನು ಮಾಪನ ವಿಭಾಗದ (ಎಲ್​ಎಂಒ) ಮನವಿಯನ್ನು ಪುರಸ್ಕರಿಸಿರುವ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯು ಎರಡು ಬಗೆಯ ಗರಿಷ್ಠ ಚಿಲ್ಲರೆ ದರ (ಎಂಆರ್​ಪಿ) ನೀತಿಯನ್ನು ರದ್ದುಪಡಿಸಿದೆ.  ಇದರಿಂದ ಉತ್ಪನ್ನಗಳ ಮಾರಾಟಗಾರರು ಒಂದೇ ಉತ್ಪನ್ನಕ್ಕೆ ಬೇರೆಬೇರೆ ಸ್ಥಳಗಳಲ್ಲಿ (ಉದಾಹರಣೆಗೆ ಮಾಲ್, ವಿಮಾನ ನಿಲ್ದಾಣ ಮತ್ತು ತಾರಾ ಹೋಟೆಲ್​ಗಳಲ್ಲಿ )ಹೆಚ್ಚಿನ ದರ ವಿಧಿಸುವುದಕ್ಕೆ ಅವಕಾಶವಿರುವುದಿಲ್ಲ. ಹೊಸ  ಆದೇಶವು 2018ರ ಜನವರಿ 1ರಿಂದ ಜಾರಿಗೆ ಬರಲಿದ್ದು, ಉತ್ಪನ್ನ ತಯಾರಿಕಾ ಕಂಪನಿಗಳು ನೀರು, ತಂಪು ಪಾನೀಯ ಅಥವಾ ಲಘು ಉಪಾಹಾರಗಳಿಗೆ ನಿಗದಿತ ಸ್ಥಳಗಳಲ್ಲಿ ಹೆಚ್ಚಿನ ಬೆಲೆ ವಿಧಿಸುವಂತಿಲ್ಲ.

ಈ ಬಗ್ಗೆ ತನ್ನ ವಾದ ಮಂಡಿಸಿದ್ದ  ಕಾನೂನು ಮಾಪನ ವಿಭಾಗ " ಕಿರಾಣಿಗಳಲ್ಲಿ ಮಾರಾಟ ಮಾಡುವ ವಸ್ತುಗಳನ್ನೇ ಮಾಲ್​ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದ್ದರಿಂದ ಅವುಗಳಿಗೆ ಬೇರೆ ಎಂಆರ್​ಪಿ ವಿಧಿಸುವ ಅಗತ್ಯವಿಲ್ಲ"  ಎಂದು ಹೇಳಿತ್ತು. ಅದರಂತೆ ಇದೀಗ ಕೇಂದ್ರದ ಆದೇಶದಂತೆ ಎಲ್​ಎಂಒ ಕೋಕಾಕೋಲಾ, ಪೆಪ್ಸಿ, ರೆಡ್​ಬುಲ್, ಯುರೇಕಾ ಪೋರ್ಬ್ಸ್, ಫ್ಲಿಪ್​ಕಾರ್ಟ್, ಅಮೆಜಾನ್ ಸಂಸ್ಥೆಗಳಿಗೆ ದ್ವಿ ಬಗೆಯ ಎಂಆರ್​ಪಿ ಅನುಸರಿಸದಂತೆ ನೋಟಿಸ್  ಜಾರಿಗೊಳಿಸಿದ್ದು, ಪ್ಯಾಕೇಜ್ಡ್ ಕಮಾಡಿಟೀಸ್ ನಿಬಂಧನೆ ಅನುಸರಿಸುವಂತೆ ಸೂಚನೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT