ವಾಣಿಜ್ಯ

ಆ.31ರೊಳಗೆ ಆಧಾರ್ ಲಿಂಕ್ ಮಾಡಿ, ಇಲ್ಲದಿದ್ರೆ ಪಾನ್ ಕಾರ್ಡ್ ರದ್ದಾಗಬಹುದು!

Lingaraj Badiger
ನವದೆಹಲಿ: ಕೇಂದ್ರ ಸರ್ಕಾರ ಆಧಾರ್ ನೊಂದಿಗೆ ಪಾನ್‌ ಕಾರ್ಡ್‌ ಲಿಂಕ್ ಮಾಡಲು ಆಗಸ್ಟ್‌ 31ರವರೆಗೂ ಗಡುವು ವಿಸ್ತರಿಸಿದ್ದು, ಒಂದು ವೇಳೆ ಆಗಸ್ಟ್ 31ರೊಳಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್ ರದ್ದಾಗಬಹುದು ಎಂಬ ಎಚ್ಚರಿಕೆಯನ್ನು ಸೋಮವಾರ ನೀಡಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಪಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್‌ ಕಾರ್ಡ್ ಕಡ್ಡಾಯ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಈ ಹಿಂದೆಯೇ ಪ್ರಕಟಿಸಿದ್ದು, ಆಧಾರ್‌–ಪಾನ್‌ ಜೋಡಣೆಗೆ ಆ.31ರ ವರೆಗೂ ಅವಕಾಶ ನೀಡಿದೆ.
ಆಧಾರ್‌ ಮತ್ತು ಪಾನ್‌ ಜೋಡಣೆ ಬಳಿಕವೇ  ಆದಾಯ ತೆರಿಗೆ ಲೆಕ್ಕಪತ್ರ ಮಾಹಿತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಹೀಗಾಗಿ ಆಗಸ್ಟ್ 31ರೊಳಗೆ ಆಧಾರ್ ಜತೆ ಪ್ಯಾನ್ ಸಂಖ್ಯೆಯನ್ನು ಲಿಂಗ್ ಮಾಡುವಂತೆ ಎಂದು ಕೇಂದ್ರ ವಿತ್ತ ಸಚಿವಾಲಯ ಟ್ವೀಟ್ ಮಾಡಿದೆ. 
ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್‌) ವಿವರ ಸಲ್ಲಿಕೆಗೆ ಜು.31 ಕೊನೆಯ ದಿನವಾದ್ದರಿಂದ ಹೆಚ್ಚಿನ ಅರ್ಜಿಗಳು ಒಂದೇ ದಿನದಲ್ಲಿ ಸಲ್ಲಿಕೆಯಾಗಿ ಆನ್‌ಲೈನ್‌ ಸರ್ವರ್‌ ಅಡಚಣೆ ಉಂಟಾಗಿದೆ. ಹಾಗಾಗಿ, ಆದಾಯ ತೆರಿಗೆ ಇಲಾಖೆ ಐ.ಟಿ ರಿಟರ್ನ್ಸ್‌ ಸಲ್ಲಿಕೆ ಅವಧಿಯನ್ನು ಆಗಸ್ಟ್ 5ರವರೆಗೆ ವಿಸ್ತರಿಸಿದೆ.
SCROLL FOR NEXT