ಸಂಗ್ರಹ ಚಿತ್ರ 
ವಾಣಿಜ್ಯ

ಫ್ಲಿಪ್ ಕಾರ್ಟ್ ತೆಕ್ಕೆಗೆ ಇ-ಬೇ; ವಿಲೀನ ಪೂರ್ಣ

ಆನ್ ಲೈನ್ ಶಾಪಿಂಗ್ ದೈತ್ಯ ಅಮೇಜಾನ್ ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಮತ್ತು ಇ-ಬೇ ಮಹತ್ವದ ಹೆಜ್ಜೆ ಇಟ್ಟಿದ್ದು, ಎರಡು ಸಂಸ್ಥೆಗಳು ಇದೀಗ ವಿಲೀನವಾಗಿವೆ.

ನವದೆಹಲಿ: ಆನ್ ಲೈನ್ ಶಾಪಿಂಗ್ ದೈತ್ಯ ಅಮೇಜಾನ್ ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಮತ್ತು ಇ-ಬೇ ಮಹತ್ವದ ಹೆಜ್ಜೆ ಇಟ್ಟಿದ್ದು, ಎರಡು ಸಂಸ್ಥೆಗಳು ಇದೀಗ ವಿಲೀನವಾಗಿವೆ.

ಚೀನಾದ ದೈತ್ಯ ಆನ್ ಲೈನ್ ಕಂಪನಿಯಾದ ಟೆನ್ಸೆಂಟ್ ಜತೆಗೆ ಕೈ ಜೋಡಿಸಿರುವ ಫ್ಲಿಪ್ ಕಾರ್ಟ್, ಇ ಬೇ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದು, ಫ್ಲಿಪ್ ಕಾರ್ಟ್ ಸಮೂಹದ ಅಡಿಯಲ್ಲಿ ಈ ಮೂರು ಸಂಸ್ಥೆಗಳು ಇನ್ನು ಮುಂದೆ ಕಾರ್ಯ ನಿರ್ವಹಿಸಲಿವೆ. ಅದರಂತೆ ಈ ದೈತ್ಯ ವಿಲೀನದ ಬಳಿಕ ಫ್ಲಿಪ್ ಕಾರ್ಟ್ ಸಮೂಹದ ಹೂಡಿಕೆ ಪ್ರಮಾಣ ಬರೊಬ್ಬರಿ  1.4 ಬಿಲಿಯನ್ ಡಾಲರ್ ಗೇರಲಿದ್ದು, ಈ ಪೈಕಿ ಫ್ಲಿಪ್ ಕಾರ್ಟ್ ಮತ್ತು ಇ ಬೇ 500 ಮಿಲಿಯನ್ ಡಾಲರ್ ಮೊತ್ತದ ಬಂಡವಾಳ ಹೂಡುತ್ತಿವೆ.

ಇನ್ನು  ಬೃಹತ್ ವಿಲೀನಕ್ಕೆ ಸಂಬಂಧಿಸಿದಂತೆ ಸಣ್ಣ ಸಂಸ್ಥೆಯಾದ ಸ್ನಾಪ್ ಡೀಲ್ ಜೊತೆ ಮಾತುಕತೆ ನಡೆಸಲಾಗಿತ್ತಾದರೂ, ವಿಲೀನಕ್ಕೆ ಸ್ನಾಪ್ ಡೀಲ್ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಸ್ನಾಪ್ ಡೀಲ್ ಹೊರತು ಪಡಿಸಿ ಮೂರು ಬೃಹತ್ ಸಂಸ್ಥೆಗಳು ವಿಲೀನವಾಗಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಇ-ಬೇ ಫ್ಲಿಪ್ ಕಾರ್ಟ್ ನ ಅಡಿಯಲ್ಲಿ ಕಾರ್ಯ ನಿರ್ವಹಸಲಿದೆ. ಇನ್ನು ವಿದೇಶ ವಾಣಿಜ್ಯ ವಹಿವಾಟಿನಲ್ಲೂ ಈ ಮೂರು ಸಂಸ್ಥೆಗಳು ಪಾಲುದಾರ ಸಂಸ್ಥೆಗಳಾಗಿದ್ದು, ಫ್ಲಿಪ್ ಕಾರ್ಟ್ ನ ಗ್ರಾಹಕರು ಇನ್ನು ಮುಂದೆ ಇನ್ನೂ ವಿಸ್ತಾರವಾದ ಮಾರುಕಟ್ಟೆಯನ್ನು ನೋಡಲಿದ್ದಾರೆ ಎಂದು ಫ್ಲಿಪ್ ಕಾರ್ಟ್ ಹೇಳಿಕೊಂಡಿದೆ.

ಭಾರತೀಯ ಗ್ರಾಹಕರನ್ನು ಕೇಂದ್ರವಾಗಿರಿಸಿಕೊಂಡೇ ಈ ಬೃಹತ್ ವಿಲೀನ ಪ್ರಕ್ರಿಯೆಗೆ ಫ್ಲಿಪ್ ಕಾರ್ಟ್ ಮುಂದಾಗಿದ್ದು, ಭಾರತೀಯ ಗ್ರಾಹಕರ ಆನ್ ಲೈನ್ ಮಾರುಕಟ್ಟೆ ಇನ್ನು ಮುಂದೆ ಮತ್ತಷ್ಟು ವಿಸ್ತಾರವಾಗಲಿದೆ. ಗ್ರಾಹಕರಿದೆ ಅತ್ಯುತ್ತಮ ಮಾರುಕಟ್ಟೆ ಸೇವೆ ಒದಗಿಸುವುದೇ ಸಂಸ್ಥೆಗ ಗುರಿ ಎಂದು ಫ್ಲಿಪ್ ಕಾರ್ಟ್ ಭಾರತ ಘಟಕದ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದ್ದಾರೆ.

ಮೂಲಗಳ ಪ್ರಕಾರ ಟೆನ್ಸೆಂಟ್, ಫ್ಲಿಪ್ ಕಾರ್ಟ್ ಮತ್ತು ಇ-ಬೇ ಸಂಸ್ಥೆಗಳು ಒಟ್ಟು 9 ಸಾವಿರ ಕೋಟಿ ರು.ಗಳ ದೊಡ್ಡ ಹೂಡಿಕೆ ಮಾಡಲಿದ್ದು, ಈ ಪೈಕಿ ಟೆನ್ಸೆಂಟ್ ಸಂಸ್ಥೆ ಸುಮಾರು 4500 ಕೋಟಿ ಹೂಡಿಕೆ ಮಾಡುತ್ತಿದೆ. ಇ ಬೇ ಸಂಸ್ಥೆಯು 3,200 ಕೋಟಿ ರು. ಮತ್ತು ಫ್ಲಿಪ್ ಕಾರ್ಟ್ ಸಂಸ್ಥೆಯಿಂದ ಸುಮಾರು 3,200 ಕೋಟಿ ರು. ಹೂಡಿಕೆಯಾಗಲಿದೆ.

ಈ ಮಹಾ ಮೈತ್ರಿಯ ಜತೆಗೆ ಫ್ಲಿಪ್ ಕಾರ್ಟ್ ಸಂಸ್ಥೆಯು ಇ ಬೇ ಸಂಸ್ಥೆಯ 1,290 ಕೋಟಿ ಮೌಲ್ಯದ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಇ ಬೇ ಕಂಪನಿಯ ಮೇಲೆ ಪ್ರಭುತ್ವ ಸಾಧಿಸಿದೆ. ಕೆಲ ದಿನಗಳ ಹಿಂದೆ, ಮಿಂತ್ರಾ ಎಂಬ ಆನ್ ಲೈನ್ ಮಾರಾಟ ಸಂಸ್ಥೆಯನ್ನು ಫ್ಲಿಪ್ ಕಾರ್ಟ್ ಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT