ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಅರುಣ್ ಜೇಟ್ಲಿ
ನವದೆಹಲಿ: ಜುಲೈ 1ರಿಂದ ದೇಶಾದ್ಯಂತ ಏಕ ಸ್ವರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ಯನ್ನು ಜಾರಿಗೊಳಿಸುವುದಕ್ಕೆ ಎಲ್ಲಾ ರಾಜ್ಯಗಳು ಒಪ್ಪಿಗೆ ಸೂಚಿಸಿವೆ ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಶನಿವಾರ ಹೇಳಿದ್ದಾರೆ.
ಇಂದು ಜಿಎಸ್ ಟಿ ಕೌನ್ಸಿಲ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಥಾಮಸ್ ಅವರು, ಬಾಕಿ ಉಳಿದಿದ್ದ ಎಲ್ಲಾ ನಿಯಮಾವಳಿಗಳನ್ನು ಮತ್ತು ತೆರಿಗೆ ನಿಯಮಗಳ ಕುರಿತು ಚರ್ಚಿಸಿ ಅಂತಿಮಗೊಳಿಸಲಾಗಿದೆ. ಜುಲೈ 1ರಿಂದ ಜಿಎಸ್ ಟಿ ಜಾರಿಗೊಳಿಸಲು ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ನಡೆದ 15ನೇ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಚಿನ್ನ, ಸಂಸ್ಕರಿಸಿದ ಆಹಾರ, ಸಿದ್ಧ ಉಡುಪು, ಪಾದರಕ್ಷೆ, ಬೀಡಿ ಸೇರಿದಂತೆ ಹಲವು ಉತ್ಪನ್ನಗಳ ಜಿಎಸ್‌ಟಿ ದರವನ್ನು ಅಂತಿಮಗೊಳಿಸಲಾಗಿದೆ.
ಚಿನ್ನದ ಮೇಲೆ ಶೇ. 3ರಷ್ಟು, ಸಂಸ್ಕರಿಸಿದ ಆಹಾರಕ್ಕೆ ಶೇ.5ರಷ್ಟು, ಬಿಸ್ಕತ್ ಮೇಲೆ ಶೇ.18ರಷ್ಟು ಹಾಗೂ ಬೀಡಿಗೆ ಶೇ. 28ರಷ್ಟು ಜಿಎಸ್‌ಟಿ ದರ ನಿಗದಿಪಡಿಸಲಾಗಿದೆ.
ಕಳೆದ ಬಾರಿ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಸುಮಾರು 1,200 ಸರಕುಗಳಿಗೆ ಹಾಗೂ 500 ಸೇವೆಗಳನ್ನು ಶೇ. 5, 12, 18 ಮತ್ತು 28ರಷ್ಟು ತೆರಿಗೆ ನಿಗದಿಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics