ಭಾರತದಲ್ಲಿ ಮೊದಲ ಡಾಟಾ ಕೇಂದ್ರ ಪ್ರಾರಂಭಿಸಲಿರುವ ಅಲೀಬಾಬಾ ಕ್ಲೌಡ್
ಚಿನಾದ ಇ-ಕಾಮರ್ಸ್ ಸಂಸ್ಥೆ ಅಲೀಬಾಬಾ ಗ್ರೂಪ್ ನ ಕಂಪ್ಯೂಟಿಂಗ್ ವಿಭಾಗವಾಗಿರುವ ಅಲೀಬಾಬಾ ಕ್ಲೌಡ್, ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಮೊದಲ ಡಾಟಾ ಕೇಂದ್ರವನ್ನು ಪ್ರಾರಂಭಿಸುವುದಾಗಿ ಹೇಳಿದೆ.
ಬೀಜಿಂಗ್: ಚಿನಾದ ಇ-ಕಾಮರ್ಸ್ ಸಂಸ್ಥೆ ಅಲೀಬಾಬಾ ಗ್ರೂಪ್ ನ ಕಂಪ್ಯೂಟಿಂಗ್ ವಿಭಾಗವಾಗಿರುವ ಅಲೀಬಾಬಾ ಕ್ಲೌಡ್, ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಮೊದಲ ಡಾಟಾ ಕೇಂದ್ರವನ್ನು ಪ್ರಾರಂಭಿಸುವುದಾಗಿ ಹೇಳಿದೆ.
ಅತಿ ಹೆಚ್ಚು ಇಂಟರ್ ನೆಟ್ ಬಳಕೆದಾರರನ್ನು ಹೊಂದಿರುವ ವಿಶ್ವದ ಎರಡನೇ ರಾಷ್ಟ್ರ ಭಾರತವಾಗಿದ್ದು, 2018 ರ ಮಾರ್ಚ್ 31 ರ ವೇಳೆಗೆ ಮುಂಬೈ ನಲ್ಲಿ ಡಾಟಾ ಸೆಂಟರ್ ಪ್ರಾರಂಭವಾಗಲಿದೆ ನಂತರ ಜಕಾರ್ತಾದಲ್ಲಿ ಮತ್ತೊಂದು ಕೇಂದ್ರ ಪ್ರಾರಂಭವಾಗಲಿದೆ ಎಂದು ಅಲೀಬಾಬಾ ಸಂಸ್ಥೆ ತಿಳಿಸಿದೆ.
ಅಮೇಜಾನ್ ಹಾಗೂ ಮೈಕ್ರೋಸಾಫ್ಟ್ ಈಗಾಗಲೇ ಕ್ಲೌಡ್ ಕಂಪ್ಯೂಟಿಂಗ್ ಇದ್ದು, ಅಲೀಬಾಬಾ ಪ್ರವೇಶದಿಂದ ಪೈಪೋಟಿ ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲೀಬಾಬಾ ಡಾಟಾ ಕ್ಲೌಡ್ ವಿನೂತನ ಮಾದರಿಯ ಸೇವೆಯನ್ನು ಒದಗಿಸಲಿದ್ದು, ನವೀನ ಮಾದರಿಯ ಡಾಟಾ ಇಂಟಲಿಜೆನ್ಸ್ ಹಾಗೂ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಒದಗಿಸಲಿದೆ ಎಂದು ಅಲೀಬಾಬ ಸಂಸ್ಥೆ ಹೇಳಿದೆ.