ವಾಣಿಜ್ಯ

ಬ್ಯಾಂಕುಗಳಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮರು ಪಾವತಿಯಾಗದ 12 ಖಾತೆಗಳನ್ನು ಗುರುತಿಸಿದ ರಿಸರ್ವ್ ಬ್ಯಾಂಕ್

Sumana Upadhyaya
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ವಿವಿಧ ಬ್ಯಾಂಕ್ ಗಳಲ್ಲಿ 5,000 ಕೋಟಿ ರೂಪಾಯಿ ಸಾಲ ಬಾಕಿ ಉಳಿದಿರುವ ತಲಾ 12 ಖಾತೆಗಳನ್ನು ಗುರುತಿಸಿದ್ದು, ದಿವಾಳಿತನ ಕಾನೂನಿನ ಅಡಿಯಲ್ಲಿ ಈ  ಸಾಲವನ್ನು  ತಕ್ಷಣ ವಸೂಲಾತಿ ಮಾಡುವಂತೆ ಉಲ್ಲೇಖಿಸಿದೆ.
ಬ್ಯಾಂಕಿಗಳಲ್ಲಿ ಸಾಲ ಪಾವತಿ ಮಾಡದೆ ಉಳಿಸಿಕೊಂಡಿರುವವರ ಹೆಸರುಗಳನ್ನು  ಬಹಿರಂಗವಾಗಿ ಸೂಚಿಸದ ಆರ್ ಬಿಐ, ಬಾಕಿ ಸಾಲಗಳನ್ನು ಮರುಪಡೆದುಕೊಳ್ಳಲು ದಿವಾಳಿತನ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಬ್ಯಾಂಕುಗಳಿಗೆ ಸೂಚಿಸಿದೆ.
ಬ್ಯಾಂಕಿಂಗ್ ವಲಯದಲ್ಲಿ ಸುಮಾರು 8 ಲಕ್ಷ ಕೋಟಿ ರೂಪಾಯಿಗೂ ಅಧಿಕ ಅನುತ್ಪಾದಕ ಆಸ್ತಿಗಳು ಬಾಕಿ ಉಳಿದುಕೊಂಡಿದ್ದು ಅವುಗಳಲ್ಲಿ 6 ಲಕ್ಷ ಕೋಟಿ ರೂಪಾಯಿ ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿವೆ.
ರಿಸರ್ವ್ ಬ್ಯಾಂಕ್ ನ ಅಂತಾರಾಷ್ಟ್ರೀಯ ಸಲಹಾ ಸಮಿತಿ ಒಂದು ತೀರ್ಮಾನಕ್ಕೆ ಬಂದಿದ್ದು ಅದರ ಪ್ರಕಾರ, ದಿವಾಳಿತನ ಮತ್ತು ದಿವಾಳಿತನ ಕೋಡ್ (ಐಬಿಸಿ) ಅಡಿಯಲ್ಲಿ ಖಾತೆಗಳ ಉಲ್ಲೇಖಕ್ಕೆ ವಿವೇಚನಾರಹಿತ ಮಾನದಂಡಗಳನ್ನು  ಅನುಸರಿಸಬೇಕಾಗುತ್ತದೆ ಎಂದು ಹೇಳಿದೆ.
ನಿಧಿಸಂಸ್ಥೆ ಮತ್ತು ನಿಧಿಸಂಸ್ಥೆಯ ಆಧಾರದ ಮೇಲೆ ಭಾರೀ ಮೊತ್ತವನ್ನು ಆಧರಿಸಿ 2016, ಮಾರ್ಚ್ 31ಕ್ಕೆ ಶೇಕಡಾ 60ರಷ್ಟು ಅನುತ್ಪಾದಕ ಆಸ್ತಿಗಳನ್ನು ಬ್ಯಾಂಕಿನಲ್ಲಿ ಹೊಂದಿರುವ ಖಾತೆಗಳ ಮತ್ತು 5,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಲ ಹೊಂದಿರುವ ಖಾತೆಗಳನ್ನು ದಿವಾಳಿತನ ಕೋಡ್ ಗಳಿಗೆ ಉಲ್ಲೇಖಿಸಲು ಅಂತರಾಷ್ಟ್ರೀಯ ಸಲಹಾ ಸಮಿತಿ ಶಿಫಾರಸು ಮಾಡಿದೆ ಎಂದು ಆರ್ ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಶಿಫಾರಸಿನ ಮಾನದಂಡದ ಪ್ರಕಾರ, ಶೇಕಡಾ 25ರಷ್ಟು ಅನುತ್ಪಾದಕ ಆಸ್ತಿಗಳನ್ನು ಹೊಂದಿರುವ 12 ಖಾತೆಗಳನ್ನು ತಕ್ಷಣವೇ ದಿವಾಳಿತನ ಕೋಡ್ ಗೆ ಉಲ್ಲೇಖಿಸಲಾಗುತ್ತದೆ. ಅಂತಾರಾಷ್ಟ್ರೀಯ ಸಲಹಾ ಸಮಿತಿ ಶಿಫಾರಸಿನ ಪ್ರಕಾರ ರಿಸರ್ವ್ ಬ್ಯಾಂಕ್ , ನಿರ್ದಿಷ್ಟ ಖಾತೆಗಳಲ್ಲಿ ದಿವಾಳಿತನ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಎಲ್ಲಾ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದೆ. ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್ ಪ್ರಕಾರ  ಇಂತಹ ಕೇಸುಗಳ  ವಿಚಾರಣೆಗೆ ಮೊದಲ ಆದ್ಯತೆ ನೀಡಲಾಗುತ್ತದೆ.
SCROLL FOR NEXT