ಸಂಗ್ರಹ ಚಿತ್ರ 
ವಾಣಿಜ್ಯ

ಆಧಾರ್ ಗೆ ಪ್ಯಾನ್ ನಂಬರ್ ಜೋಡಣೆ ಮಾಡುವುದು ಹೇಗೆ?

ಆದಾಯ ತೆರಿಗೆ ಕಾಯ್ದೆಯ ನಿಯಮ 114ಕ್ಕೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ ಮತ್ತು ಆಧಾರ್ ನಂಬರ್ ಜೋಡಣೆ ಕಡ್ಟಾಯಗೊಳಿಸಿದ್ದು, ಇದೇ ಜುಲೈ 1ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿದೆ.

ನವದೆಹಲಿ: ಆದಾಯ ತೆರಿಗೆ ಕಾಯ್ದೆಯ ನಿಯಮ 114ಕ್ಕೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ ಮತ್ತು ಆಧಾರ್ ನಂಬರ್ ಜೋಡಣೆ ಕಡ್ಟಾಯಗೊಳಿಸಿದ್ದು, ಇದೇ ಜುಲೈ 1ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿದೆ.

ಸರ್ಕಾರಿ ಮೂಲಗಳ ಪ್ರಕಾರ ಸುಮಾರು 25 ಕೋಟಿ ಆಧಾರ್ ಹೊಂದಿದ್ದು, ಸುಮಾರು 111 ಕೋಟಿ ಜನರು ಆಧಾರ್ ಸಂಖ್ಯೆ ಪಡೆದಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಆಧಾರ್-ಪ್ಯಾನ್ ಜೋಡಣೆಗೆ ಸಾಕಷ್ಟು ಕ್ರಮಗಳನ್ನು  ಕೈಗೊಂಡಿದ್ದು, ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್ ಗೆ ಜೋಡಣೆ ಮಾಡುವ ಬಗೆಯನ್ನು ತನ್ನ ಆದಾಯ ತೆರಿಗೆ ಇಲಾಖೆ ಜಾಲತಾಣದಲ್ಲಿ ನೀಡಿದೆ. ಹೀಗಿದ್ದೂ ಸಾಕಷ್ಟು ಮಂದಿಗೆ ಆಧಾರ್-ಪ್ಯಾನ್ ಜೋಡಣೆಯ ಮಾಹಿತಿ  ಸರಿಯಾಗಿ ತಿಳಿದಿಲ್ಲ.

ಕೇಂದ್ರ ಸರ್ಕಾರ ತಿಳಿಸಿರುವಂತೆ ಆಧಾರ್ ನಂಬರ್ ಅನ್ನು ಪ್ಯಾನ್ ಕಾರ್ಡ್ ಗೆ ಜೋಡಣೆ ಮಾಡುವ ವಿವಿಧ ಬಗೆಗಳನ್ನು ಇಲ್ಲಿ ವಿವರಿಸಲಾಗಿದೆ.

ಆಧಾರ್ ನಂಬರ್ ಅನ್ನು ಪ್ಯಾನ್ ಕಾರ್ಡ್ ಗೆ ಎಲ್ಲಿ ಜೋಡಣೆ ಮಾಡಬಹುದು?
ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯ ಜಾಲತಾಣದಲ್ಲಿ ಆಧಾರ್ ನಂಬರ್-ಪ್ಯಾನ್ ಲಿಂಕ್ ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಬಳಕೆದಾರರು ಜಾಲತಾಣಕ್ಕೆ ಲಾಗಿನ್ ಆಗದೆಯೂ ಆಧಾರ್-ಪ್ಯಾನ್ ಜೋಡಣೆ  ಮಾಡಬಹುದಾಗಿದೆ.

www.incometaxindiaefiling.gov.in. ಈ ಜಾಲತಾಣವನ್ನು ಕ್ಲಿಕ್ ಮಾಡಿದರೆ, ಆದಾಯತೆರಿಗೆ ಇಲಾಖೆಯ ಜಾಲತಾಣ ತೆರೆದುಕೊಳ್ಳುತ್ತದೆ. ಈ ಜಾಲತಾಣದ ಎಡಭಾಗದಲ್ಲಿ "ಆಧಾರ್ ಜೋಡಣೆ"  (Link Aadhaar) ಎಂಬ ಲಿಂಕ್ ನೀಡಲಾಗಿದ್ದು, ಇದನ್ನು ಕ್ಲಿಕ್ಕಿಸಿದರೆ ಆಧಾರ್-ಪ್ಯಾನ್ ಜೋಡಣೆಯ ಪ್ರತ್ಯೇಕ ವಿಭಾಗ (https://incometaxindiaefiling.gov.in/e-Filing/Services/LinkAadhaarHome.html) ತೆರೆದುಕೊಳ್ಳುತ್ತದೆ.

ಈ ವಿಭಾಗದಲ್ಲಿ ತೆರಿಗೆದಾರರು ಮೊದಲ ಬಾಕ್ಸ್ ನಲ್ಲಿ ತಮ್ಮ ಪ್ಯಾನ್ ಕಾರ್ಡ್ ನಂಬರ್, ಎರಡನೇ ಬಾಕ್ಸ್ ನಲ್ಲಿ ಆಧಾರ್ ನಂಬರ್ ಮೂರನೇ ಬಾಕ್ಸ್ ನಲ್ಲಿ ಆಧಾರ್ ನಲ್ಲಿರುವಂತೆ ತಮ್ಮ ಹೆಸರನ್ನು ನಮೂದಿಸಬೇಕು. ಬಳಿಕ ಕೆಳಗೆ  ಕಾಣುವ ಕೋಡ್ ಅನ್ನು ಬಾಕ್ಸ್ ನಲ್ಲಿ ನಮೂದಿಸಿ ಅದರ ಕೆಳಗಿರುವ ಲಿಂಕ್ ಆಧಾರ್ ಎಂಬ ಬಾಕ್ಸ್ ಅನ್ನು ಕ್ಲಿಕ್ಕಿಸಿದರೆ ಆಧಾರ್ ಮತ್ತು ಪ್ಯಾನ್ ಜೋಡಣೆ ಕಾರ್ಯ ಪೂರ್ಣಗೊಳ್ಳುತ್ತದೆ.

ಒಂದು ವೇಳೆ ನಿಮ್ಮ ಹೆಸರು ತಪ್ಪಾಗಿದ್ದರೆ ಅಥವಾ ದೃಷ್ಟಿಹೀನರಾಗಿದ್ದರೆ ಕೋಡ್ ಗೆ ಬದಲಾಗಿ ಜನ್ಮ ದಿನಾಂಕ ನಮೂದಿಸುವ ಮೂಲಕ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಪಡೆದು ಆಧಾರ್ ಕಾರ್ಡ್ ಅನ್ನು ಜೋಡಣೆ  ಮಾಡಬಹುದಾಗಿದೆ.

ಒಂದು ವೇಳೆ ಆಧಾರ್-ಪ್ಯಾನ್ ಕಾರ್ಡ್ ಗಳಲ್ಲಿನ ಹೆಸರುಗಳ ಅಕ್ಷರಗಳು ಒಂದೇ ತೆರನಾಗಿರದೇ ಬೇರೆ ಬೇರೆಯದ್ದಾಗಿದ್ದರೆ ಆಗ ನಿಮ್ಮ ಜೋಡಣೆ ಕಾರ್ಯ ವಿಫಲವಾಗುತ್ತದೆ. ಆಗ ನೀವು ಕಡ್ಡಾಯವಾಗಿ ನಿಮ್ಮ ಪ್ಯಾನ್ ಕಾರ್ಡ್ ನಲ್ಲಿ  ಅಥವಾ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಮತ್ತೊಂದರಲ್ಲಿ ಇರುವಂತೆ ಬದಲಾಯಿಸಿಕೊಳ್ಳಬೇಕಾಗುತ್ತದೆ.

ಎಸ್ಎಂಎಸ್ ಮೂಲಕವೂ ಆಧಾರ್-ಪ್ಯಾನ್ ಜೋಡಣೆ ಸಾಧ್ಯ
ಇನ್ನು ವೆಬ್ ಸೈಟ್ ಮೂಲಕ ಆಧಾರ್ ಜೋಡಣೆ ತಿಳಿಯುವುದಿಲ್ಲ ಎನ್ನುವವರು ತಮ್ಮ ಮೊಬೈಲ್ ನಲ್ಲಿ ಎಸ್ ಎಂಎಸ್ ಕಳುಹಿಸುವ ಮೂಲಕವೂ ಆಧಾರ್-ಪ್ಯಾನ್ ಜೋಡಣೆ ಮಾಡಬಹುದು. ಇದಕ್ಕಾಗಿ ನಿಮ್ಮ ರಿಜಿಸ್ಟರ್ಡ್ ಮೊಬೈಲ್  ಮೂಲಕ 567678 ಅಥವಾ 56161 ಈ ಸಂಖ್ಯೆಗೆ ಕೆಳಕಂಡ ಮಾದರಿಯಲ್ಲಿ ಸಂದೇಶ ರವಾನಿಸುವ ಮೂಲಕ ಆಧಾರ್-ಪ್ಯಾನ್ ಜೋಡಣೆ ಮಾಡಬಹುದು.

ಉದಾಹರಣೆಗೆ ನಿಮ್ಮ ಆಧಾರ್ ಸಂಖ್ಯೆ 123456789012 ಆಗಿದ್ದರೆ ಮತ್ತು ಪ್ಯಾನ್ ಸಂಖ್ಯೆ ABCDE1234F ಆಗಿದ್ದರೆ, ನಿಮ್ಮ ಮೊಬೈಲ್ ನಲ್ಲಿ UIDPAN ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ಬಳಿಕ ನಿಮ್ಮ ಆಧಾರ್  ನಂಬರ್ 123456789012 ಟೈಪಿಸಿ ಬಳಿಕ ಒಂದು ಸ್ಪೇಸ್ ನೀಡಿ ಪ್ಯಾನ್ ಸಂಖ್ಯೆ ABCDE1234F ಅನ್ನು ಟೈಪಿಸಿ 567678 ಅಥವಾ 56161 ನಂಬರ್ ಗೆ ಎಸ್ ಎಂಎಸ್ ಮಾಡಬೇಕು.

UIDPAN <12 digit Aadhaar><10 digit PAN>

ಉದಾಹರಣೆ: UIDPAN 123456789012 ABCDE1234F

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT