ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಕೈಗೆಟುಕುವ ದರದಲ್ಲಿ ಸ್ಪೈಸ್ ಜೆಟ್: ಟಿಕೆಟ್ ಬೆಲೆಯಲ್ಲಿ ಭಾರೀ ಕಡಿತ

ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮಾನ್ಸೂನ್ ಮೆಗಾ ಸೇಲ್ ಆಫರ್ ನೀಡಿದ್ದು, ಟಿಕೆಟ್ ಬೆಲೆಯಲ್ಲಿ ಭಾರಿ ಆಫರ್...

ಸ್ಪೈಸ್ ಜೆಟ್
Shilpa D
Updated On : 28 Jun 2017, 3:35 am
ನವದೆಹಲಿ: ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ  ಮಾನ್ಸೂನ್ ಮೆಗಾ ಸೇಲ್ ಆಫರ್ ನೀಡಿದ್ದು, ಟಿಕೆಟ್ ಬೆಲೆಯಲ್ಲಿ ಭಾರಿ ಆಫರ್ ನೀಡಿದೆ.
699 ರೂಗೆ ವಿಮಾನಯಾನ ಸೇವೆ ಕಲ್ಪಿಸಲು ಮುಂದಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡುವುದಾಗಿ ಘೋಷಿಸಿರುವ ಸ್ಪೈಸ್ ಜೆಟ್, ಈ ಆಫರ್ ನಲ್ಲಿ ದೇಶಿಯ ವಿಮಾನ ಯಾನಕ್ಕೆ 699 ರು ಆರಂಭಿಕ ಟಿಕೆಟ್ ದರ ನಿಗದಿಗೊಳಿಸಿದೆ.
ಜಮ್ಮು-ಶ್ರೀನಗರ, ಶ್ರೀನಗರ- ಜಮ್ಮು, ಗುವಾಹಟಿ- ಅಗರ್ತಲಾ, ಅಗರ್ತಲಾ-ಗುವಾಹಟಿ ಮತ್ತು ಐಜ್ವಾಲ್ ಸೇರಿದಂತೆ ಇತರೆ ನಗರಗಳಿಗೆ ಈ ಆಫರ್ ಅನ್ವಯವಾಗಲಿದೆ.

Advertisement

Advertisement

ವಿಮಾನಯಾನ ಮಾಡುವ ಪ್ರಯಾಣಿಕರಿಗೆ ಲಕ್ಕಿ ಡ್ರಾ ಇದ್ದು, ದುಬೈ, ಕೊಲಂಬೊ ಮತ್ತು ಬ್ಯಾಂಕಾಕ್ ಮತ್ತು ಮಸ್ಕಟ್ ಗೆ ಹಾಲಿಡೇ ಪ್ಯಾಕೇಜ್ ಬಹುಮಾನ ಸಿಗಲಿದೆ.
ಜೂನ್ 28 ರಿಂದ ಆರಂಭವಾಗುವ ಈ ಆಫರ್ ಜುಲೈ-4 ರ ಮಧ್ಯರಾತ್ರಿಯಂದು ಕೊನೆಗೊಳ್ಳಲಿದೆ, ಜುಲೈ 14 ರಿಂದ ಮಾರ್ಚ್ 24 ರ ವರೆಗೆ ಸಂಚರಿಸುವ ಎಲ್ಲಾ ನಾನ್ ಸ್ಟಾಪ್ ದೇಶೀಯ ಸ್ಪೈಸ್ ಜೆಟ್ ವಿಮಾನ ಗಳಿಗೆ ಈ ದರ ಅನ್ವವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement