ವಾಣಿಜ್ಯ

ಜಿಎಸ್ ಟಿ ಗೊಂದಲ: 44 ಅಂಕಗಳ ಇಳಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ 18 ಅಂಕ ಇಳಿಕೆ!

Srinivasamurthy VN

ಮುಂಬೈ: ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಅಲ್ಪ ಇಳಿಕೆ ಕಂಡಿದೆ.

ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 44.47 ಅಂಕಗಳ ಇಳಿಕೆಯೊಂದಿಗೆ 30,813.05 ಅಂಕಗಳಿಗೆ ಇಳಿಕೆಯಾಗಿದ್ದು, ಸೆನ್ಸೆಕ್ಸ್ ಶೇ.0.14 ಳಷ್ಟು ನಷ್ಟ ಅನುಭವಿಸಿದೆ. ಅಂತೆಯೇ ನಿಫ್ಟಿ ಕೂಡ 18 ಅಂಕಗಳ ಕುಸಿತ ಕಂಡಿದ್ದು, 9,486.10  ಅಂಕಗಳಿಗೆ ಇಳಿಕೆಯಾಗಿದೆ. ಇನ್ನು ನಿಫ್ಟಿಯಲ್ಲಿ ಶೇ.0.19ರಷ್ಟು ನಷ್ಟ ಕಂಡುಬಂದಿದೆ. ಪ್ರಮುಖವಾಗಿ ಜಿಎಸ್ ಟಿ ಕಾಯ್ದೆಯ ಕುರಿತಾದ ಹೂಡಿಕೆದಾರರಲ್ಲಿನ ಗೊಂದಲವೇ ಇಂದಿನ ವಹಿವಾಟಿನ ಕುಸಿತಕ್ಕೆ ಕಾರಣ ಎಂದು  ಹೇಳಲಾಗುತ್ತಿದೆ.

ಇನ್ನು ಎಲ್ ಅಂಡ್ ಟಿ ಮತ್ತು ಭಾರ್ತಿ ಏರ್ ಟೆಲ್ ಸಂಸ್ಥೆಗಳು ತಲಾ ಶೇ.2.22 ನಷ್ಟ ಅನುಭವಿಸಿದ್ದು, ಐಸಿಸಿಐ ಬ್ಯಾಂಕ್  ಶೇ.1.26 ಮತ್ತು ಟಾಟಾ ಮೋಟಾರ್ಸ್ ಸಂಸ್ಥೆ ಶೇ.1.23 ರಷು ನಷ್ಟ ಅನುಭವಿಸಿವೆ.

ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣಾ ಕ್ರಮ ಜಿಎಎಸ್ ಟಿ ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ರಾತ್ರಿ 12 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್​ನ ವಿಶೇಷ ಅಧಿವೇಶನದಲ್ಲಿ ಸರಕು  ಮತ್ತು ಸೇವಾ ತೆರಿಗೆಗೆ (ಜಿಎಸ್​ಟಿ) ಗೆ ಚಾಲನೆ ನೀಡಲಿದ್ದಾರೆ. ದಶಕಗಳಿಂದ ಚಾಲ್ತಿಯಲ್ಲಿದ್ದ ಹಳೆ ತೆರಿಗೆ ಪದ್ಧತಿಗೆ ಬದಲಾಗಿ ಈಗಿನ ಸ್ಥಿತಿಗೆ ಅನ್ವಯವಾಗುವಂತೆ ಪರಿಷ್ಕರಿಸಲಾಗಿರುವ ಹೊಸ ಸರಕು ಮತ್ತು ಸೇವಾ ತೆರಿಗೆ ಇಂದು  ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

SCROLL FOR NEXT