ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಜಿಎಸ್ ಟಿ ಜಾರಿ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ದರ ಇಳಿಕೆ

ಮಧ್ಯರಾತ್ರಿ ಜಿಎಸ್‌ಟಿ ಜಾರಿಯಾದ ಕೂಡಲೇ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 3.42 ರು, ಮತ್ತು ಡೀಸೆಲ್ ದರ 3.57 ರು ಕಡಿತವಾಗಿದೆ ಎಂದು ತಿಳಿದುಬಂದಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 1 Jul 2017, 11:38 am

ಬೆಂಗಳೂರು: ಮಧ್ಯರಾತ್ರಿ ಜಿಎಸ್‌ಟಿ ಜಾರಿಯಾದ ಕೂಡಲೇ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 3.42  ರು, ಮತ್ತು ಡೀಸೆಲ್ ದರ 3.57 ರು ಕಡಿತವಾಗಿದೆ ಎಂದು ತಿಳಿದುಬಂದಿದೆ.

ಶುಕ್ರವಾರ ಬೆಂಗಳೂರಿನಲ್ಲಿ 57.80 ರು. ಇದ್ದ ಡೀಸೆಲ್‌ ದರ, ಶನಿವಾರ ಬೆಳಗ್ಗೆ 6 ಗಂಟೆಗೆ ಅನ್ವಯವಾಗುವಂತೆ 54.23 ರು.ಗೆ ಇಳಿಕೆಯಾಗಿದೆ. ಅಂತೆಯೇ ನಿನ್ನೆ 67.66 ರು. ಇದ್ದ ಪೆಟ್ರೋಲ್‌ ದರ 64.24 ರು.ಗಳಿಗೆ  ಇಳಿಕೆಯಾಗಿದೆ. ಅಂದರೆ ಡೀಸೆಲ್‌ನಲ್ಲಿ 3.57 ರೂ. ಕಡಿತವಾಗಿದ್ದರೆ, ಪೆಟ್ರೋಲ್‌ನಲ್ಲಿ 3.42 ರೂ.ನಷ್ಟು ಇಳಿಕೆಯಾಗಿದೆ.

ಇದುವರೆಗೆ ಇದ್ದ ಬೇರೆ ಎಲ್ಲ ರೀತಿಯ ತೆರಿಗೆಗಳು ಹೋಗಿ, ಜಿಎಸ್‌ಟಿಯೊಂದೇ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎರಡರಲ್ಲೂ ಈ ಪ್ರಮಾಣದ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಪೆಟ್ರೋಲ್ ಉತ್ಪನ್ನಗಳ ಮೇಲಿನ ತೆರಿಗೆ ಏರಿಕೆ
ಇತ್ತ ಈ ಹಿಂದೆ ರೈತರ ಸಾಲಮನ್ನಾ ಮಾಡಿದ್ದ ರಾಜ್ಯ ಸರ್ಕಾರ, ತನ್ನ ಮೇಲಿನ ಸುಮಾರು 8300 ಕೋಟಿ ರುಗಳ ಹೊರೆಯನ್ನು ಇಳಿಕೆ ಮಾಡಿಕೊಳ್ಳಲು ತನ್ನ ಪಾಲಿನ ತೈಲೋತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣವನ್ನು ಏರಿಕೆ  ಮಾಡಲು ನಿರ್ಧರಿಸಿದೆ. ಅದರಂತೆ ಮುಂದಿನ 4 ತಿಂಗಳಲ್ಲಿ 4 ಸಾವಿರ ಕೋಟಿ ಸಂಗ್ರಹ ಮಾಡುವ ಉದ್ದೇಶದಿಂದ ಹಾಲಿ ಇರುವ ತೈಲೋತ್ಪನ್ನಗಳ ಮೇಲಿನ ತನ್ನ ಪಾಲಿನ ತೆರಿಗೆ ಪ್ರಮಾಣವನ್ನು ಮತ್ತು ಅಬಕಾರಿ ಸುಂಕವನ್ನು  ಶೇ.2ಕ್ಕೆ ಏರಿಕೆ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments