ಸಂಗ್ರಹ ಚಿತ್ರ 
ವಾಣಿಜ್ಯ

ಜಿಯೋ ಪ್ರೈಮ್ ಪ್ಲಾನ್ ಗೆ ಏರ್ಟೆಲ್ ಮಾಸ್ಟರ್ ಪ್ಲಾನ್: ಕೇವಲ 345 ರು.ಗೆ 28 ಜಿಬಿ ಡಾಟಾ!

ತೀರಾ ಅಗ್ಗದ ಡಾಟಾ ಪ್ಲಾನ್ ನೀಡುವ ಮೂಲಕ ಮೊಬೈಲ್ ಸಂಪರ್ಕ ಮಾರುಕಟ್ಟೆ ಮೇಲೆ ಅಧಿಪತ್ಯ ಸಾಧಿಸಿರುವ ಜಿಯೋ ಪ್ರಾಬಲ್ಯವನ್ನು ಮುರಿಯುವ ಸಲುವಾಗಿ ಹರಸಾಹಸ ಪಡುತ್ತಿರುವ ಏರ್ ಟೆಲ್ ಇದೀಗ ತನ್ನ ಗ್ರಾಹಕರಿಗೆ ಕೇಲಸ 345 ರು.ಗೆ ಬರೊಬ್ಬರಿ 28 ಜಿಬಿ ಡಾಟಾ ನೀಡಲು ಮುಂದಾಗಿದೆ.

ಮುಂಬೈ: ತೀರಾ ಅಗ್ಗದ ಡಾಟಾ ಪ್ಲಾನ್ ನೀಡುವ ಮೂಲಕ ಮೊಬೈಲ್ ಸಂಪರ್ಕ ಮಾರುಕಟ್ಟೆ ಮೇಲೆ ಅಧಿಪತ್ಯ ಸಾಧಿಸಿರುವ ಜಿಯೋ ಪ್ರಾಬಲ್ಯವನ್ನು ಮುರಿಯುವ ಸಲುವಾಗಿ ಹರಸಾಹಸ ಪಡುತ್ತಿರುವ ಏರ್ ಟೆಲ್ ಇದೀಗ ತನ್ನ  ಗ್ರಾಹಕರಿಗೆ ಕೇಲಸ 345 ರು.ಗೆ ಬರೊಬ್ಬರಿ 28 ಜಿಬಿ ಡಾಟಾ ನೀಡಲು ಮುಂದಾಗಿದೆ.

ಈ ಹಿಂದೆ ಜಿಯೋ ಘೋಷಣೆ ಮಾಡಿದ್ದಂತೆ 303 ರುಗೆ. 28 ಜಿಬಿ ಡಾಟಾ (ಪ್ರತಿನಿತ್ಯ 1 ಜಿಬಿ ಡಾಟಾ) ಮತ್ತು ಅನಿಯಮಿತ ಎಸ್ ಟಿಡಿ, ಲೋಕಲ್ ಕರೆ ಉಚಿತ ಆಫರ್ ಘೋಷಣೆ ಮಾಡಿತ್ತು. ಅಂತೆಯೇ ಏರ್ ಟೆಲ್ ಕೂಡ 345 ಪ್ಲಾನ್  ಬಿಡುಗಡೆ ಮಾಡಿದ್ದು, ಇಲ್ಲಿಯೂ 28 ಜಿಬಿ ಡಾಟಾ ಹಾಗೂ ಅನಿಯಮಿತ ಲೋಕಲ್, ಎಸ್ ಟಿಡಿ ಕರೆಗಳಿವೆಯಾದರೂ, ಏರ್ ಟೆಲ್ ಡಾಟಾ ಬಳಕೆಗೆ ಒಂದಷ್ಟು ನಿಯಂತ್ರಣ ಹೇರಿದೆ. ಈ ಹೊಸ ಪ್ಲಾನ್ ಬಳಕೆದಾರರು ಹಗಲು ವೇಳೆ 500  ಎಂಬಿ ಡಾಟಾ ಮತ್ತು ರಾತ್ರಿ ವೇಳೆ 500 ಎಂಬಿ ಡಾಟಾ ಬಳಕೆ ಮಾಡಬಹುದಾಗಿದೆ. ನಮಗಿಚ್ಛಿಸಿದಾಗ ಡಾಟಾ ಬಳಕೆ ಮಾಡಲು ಬೇರೆ ಪ್ಲಾನ್ ಇದ್ದು 549 ಪ್ಯಾಕ್ ನಲ್ಲಿ ಗ್ರಾಹಕರು ಬೇಕೆಂದಾಗ ಡಾಟಾ ಬಳಕೆ ಮಾಡಬಹುದಾಗಿದೆ.

ಅಂತೆಯೇ ಯಾವ ಗ್ರಾಹಕರು ಮಾರ್ಚ್ 31ರೊಳಗೆ 345 ಪ್ಯಾಕ್ ಮತ್ತು 549 ಪ್ಯಾಕ್ ಗಳನ್ನು ಖರೀದಿ ಮಾಡುತ್ತಾರೆಯೋ ಮುಂದಿನ 12 ತಿಂಗಳವರೆಗೂ ಈ ಆಫರ್ ಚಾಲ್ತಿಯಲ್ಲಿರುತ್ತದೆ.

ಒಟ್ಟಾರೆ ಮೊಬೈಲ್ ಸೇವಾ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸಬೇಕು ಎನ್ನುವ ಸಂಸ್ಥೆಗಳ ಸ್ಪರ್ಧೆಯಿಂದಾಗಿ ದಿನಕ್ಕೊಂದು ಆಫರ್ ಗಳು ಬರುತ್ತಿದ್ದು, ಯಾವ ಆಫರ್ ತೆಗೆದುಕೊಳ್ಳಬೇಕು ಎನ್ನುವ ಗೊಂದಲ ಮಾತ್ರ  ಗ್ರಾಹಕನದ್ದಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ