ವಾಣಿಜ್ಯ

ಸರಕು ಮತ್ತು ಸೇವಾ ತೆರಿಗೆ ಮಸೂದೆ: ಮಾರ್ಚ್ 22ರಂದು ಮಂಡನೆ ಸಾಧ್ಯತೆ

Sumana Upadhyaya
ನವದೆಹಲಿ: ಕೇಂದ್ರ ಸರ್ಕಾರದ ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ಮಾರ್ಚ್ 22ರಂದು ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
ಕೇಂದ್ರ ಜಿಎಸ್ಟಿ ಕಾನೂನು, ಆಂತರಿಕ ಜಿಎಸ್ಟಿ ಕಾನೂನು, ರಾಜ್ಯ ಜಿಎಸ್ಟಿ ಕಾನೂನು, ಕೇಂದ್ರಾಡಳಿತ ಜಿಎಸ್ಟಿ ಮತ್ತು ಪರಿಹಾರ ಕಾನೂನುಗಳನ್ನು ಒಟ್ಟಾಗಿ ಮಂತ್ರಿ ಮಂಡಲದ ಒಪ್ಪಿಗೆ ಪಡೆಯಲು ಮಾರ್ಚ್ 22ರಂದು ಮಂಡಿಸಲಾಗುವುದು ಮತ್ತು ಸಂಸತ್ತಿನ ಮುಂದೆ ಮಾರ್ಚ್ 27ರಂದು ಮಂಡಿಸಲಾಗುವುದು ಎಂದು ಹೇಳಿದೆ.
ದೇಶದ ಬಹುದೊಡ್ಡ ತೆರಿಗೆ ಸುಧಾರಣೆ ಕುರಿತಾದ ಮಸೂದೆ ಎನಿಸಿಕೊಂಡಿರುವ ಸರಕು ಮತ್ತು ಸೇವಾ ತೆರಿಗೆಯನ್ನು ಶತಾಯಗತಾಯ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. 
SCROLL FOR NEXT