ವಾಣಿಜ್ಯ

ಸಣ್ಣ ಉಳಿತಾಯ ಠೇವಣಿ ಮೇಲೆ 0.1% ಬಡ್ಡಿ ದರ ಇಳಿಕೆ; ನಾಳೆಯಿಂದ ಜಾರಿ

Sumana Upadhyaya
ನವದೆಹಲಿ: ಸಣ್ಣ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಶುಕ್ರವಾರ 0.1ರಷ್ಟು ಇಳಿಕೆ ಮಾಡಿದೆ. ನೂತನ ಬಡ್ಡಿದರ ನಾಳೆಯಿಂದಲೇ ಜಾರಿಗೆ ಬರಲಿದೆ.
ಕಳೆದ ವರ್ಷ ಏಪ್ರಿಲ್ ನಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ತ್ರೈಮಾಸಿಕದ ಆಧಾರದಲ್ಲಿ ಮರುಮೌಲ್ಯಮಾಪನ ಮಾಡಲಾಗುತ್ತಿತ್ತು. ಜನವರಿಯಿಂದ ಮಾರ್ಚ್ ತಿಂಗಳವರೆಗೆ ಬಡ್ಡಿದರವನ್ನು ಕಳೆದ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಯಾವುದೇ ಬದಲಾವಣೆ ಮಾಡಿರಲಿಲ್ಲ.
ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ, ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್) ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ವಾರ್ಷಿಕ ಬಡ್ಡಿದರ ಶೇಕಡಾ 8ರಷ್ಟಿರುತ್ತದೆ.  5 ವರ್ಷಗಳ ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಸಹ ಬಡ್ಡಿದರದ ಪ್ರಮಾಣ ಶೇಕಡಾ 8ರಷ್ಟು.ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದವರಿಗೆ ಶೇಕಡಾ 7.7ರಷ್ಟು ಬಡ್ಡಿದರವಿದ್ದು, ಅದು 112 ದಿನಗಳಲ್ಲಿ ಮೆಚ್ಯೂರ್ ಆಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ವಾರ್ಷಿಕ 8.5 ಶೇಕಡಾ ಬಡ್ಡಿ, 5 ವರ್ಷಗಳಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಶೇಕಡಾ 8.5 ಬಡ್ಡಿ ದೊರಕಲಿದೆ. ಹಿರಿಯ ನಾಗರಿಕರಿಗೆ ತ್ರೈಮಾಸಿಕದಲ್ಲಿ ಬಡ್ಡಿ ನೀಡಲಾಗುತ್ತದೆ.
ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಿದವರಿಗೆ ವರ್ಷಕ್ಕೆ ಶೇಕಡಾ 4ರಷ್ಟು ಬಡ್ಡಿ, ಅವಧಿ ಖಾತೆಗಳಲ್ಲಿ 1ರಿಂದ 5 ವರ್ಷಗಳವರೆಗೆ ಹೂಡಿಕೆ ಮಾಡಿದವರಿಗೆ ವರ್ಷಕ್ಕೆ ಶೇಕಡಾ 7ರಿಂದ 7.8 ತ್ರೈಮಾಸಿಕ ಅವಧಿಯಲ್ಲಿ ಬಡ್ಡಿ ನೀಡಲಾಗುತ್ತದೆ. 5 ವರ್ಷಗಳ ಮರುಕಳಿಸುವ ಠೇವಣಿ (recurring deposit) ಗೆ ವರ್ಷಕ್ಕೆ 7.3 ಶೇಕಡಾ ಬಡ್ಡಿದರವಿರುತ್ತದೆ.
SCROLL FOR NEXT