ಸ್ಯಾನ್ ಫ್ರಾನ್ಸಿಸ್ಕೊ: ಫೇಸ್ ಬುಕ್ ಬಳಕೆದಾರರ ಸಂಖ್ಯೆ 2 ಬಿಲಿಯನ್ ದಾಟಿದ್ದು, ತ್ರೈಮಾಸಿಕ ವರದಿಯಲ್ಲಿ ಸಾಮಾಜಿಕ ಜಾಲತಾಣ ಸಂಸ್ಥೆಯ ಆದಾಯ 3 ಬಿಲಿಯನ್ ಡಾಲರ್ ದಾಟಿದೆ.
ವರ್ಷದ ಮೊದಲ ಮೂರು ತಿಂಗಳಲ್ಲಿ ಒಟ್ಟು 8.03 ಬಿಲಿಯನ್ ಡಾಲರ್ ಗಳಿಕೆಯಲ್ಲಿ ಸಂಸ್ಥೆಗೆ 3.06 ಬಿಲಿಯನ್ ಡಾಲರ್ ಆದಾಯ ಬಂದಿದೆ. ಕಳೆದ ವರ್ಷದ ಶೇ.49 ರಷ್ಟು ಆದಾಯಕ್ಕೆ ಹೋಲಿಸಿದರೆ ಈ ವರ್ಷ ಶೇ.79 ರಷ್ಟು ಆದಾಯ ಬಂದಿದೆ ಎಂದು ಫೇಸ್ ಬುಕ್ ಹೇಳಿದೆ.
ಪ್ರತಿ ತಿಂಗಳು ಫೇಸ್ ಬುಕ್ ಬಳಸುವವರ ಸಂಖ್ಯೆ ಶೇ.17 ರಷ್ಟು ಏರಿಕೆಯಾಗಿದ್ದು, 1.94 ಬಿಲಿಯನ್ ಬಳಕೆದಾರರಿದ್ದು 2017 ವರ್ಷಕ್ಕೆ ಶುಭಾರಂಭ ದೊರೆತಿದೆ ಎಂದು ಫೇಸ್ ಬುಕ್ ನ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹೇಳಿಕೆ ನೀಡಿದ್ದಾರೆ.
ಬಲವಾದ ಜಾಗತಿಕ ಸಮುದಾಯಕ್ಕಾಗಿ ಟೂಲ್ ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಫೇಸ್ ಬುಕ್ ಆದಾಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿತ್ತು. ಆದರೆ ಷೇರುಗಳಲ್ಲಿ ಕುಸಿತ ಕಂಡಿದೆ. ಇದರ ಹೊರತಾಗಿಯೂ ಸಹ ಫೇಸ್ ಬುಕ್ ನ ಬೆಳವಣಿಗೆ ಸ್ಥಿರವಾಗಿರಲಿದ್ದು, ಡಿಜಿಟಲ್ ಜಾಹಿರಾತಿನಿಂದ 36.29 ಬಿಲಿಯನ್ ಡಾಲರ್ ನಷ್ಟು ಆದಾಯ ಗಳಿಸಲಿದೆ.