ಮುಂಬೈ: ಪ್ರಸಕ್ತ ವರ್ಷ ಉತ್ತಮ ಮಾನ್ಸೂನ್ ಮಳೆ ಬೀಳಲಿದೆ ಎಂಬ ಕೇಂದ್ರ ಹವಾಮಾನ ಇಲಾಖೆಯ ವರದಿ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದೆ.
ದಿನದ ವಹಿವಾಟು ಆರಂಭವಾಗುತ್ತಿದ್ದಂತೆಯೇ ಬಿಎಸ್ ಇ ಚೇತೋಹಾರಿ ವಹಿವಾಟು ಕಂಡಿತು. ಸೆನ್ಸೆಕ್ಸ್ 258.88 ಅಂಕಗಳ ಏರಿಕೆಯೊಂದಿಗೆ 30192.13 ಅಂಕಗಳಿಗೆ ಏರಿಕೆಯಾದರೆ, ನಿಫ್ಟಿ 68.20 ಅಂಕಗಳ ಏರಿಕೆಯೊಂದಿಗೆ 9385.05 ಅಂಕಗಳಿಗೆ ಏರಿಕೆಯಾಗಿದೆ. ಇಂದಿನ ವಹಿವಾಟಿನಲ್ಲಿ ಉಕ್ಕು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಲಾಭಾಂಶ ಕಂಡಿದ್ದರೆ, ಐಟಿ ವಲಯ ಷೇರುಗಳ ಮೌಲ್ಯ ಕುಸಿತಕಂಡಿದೆ.
ಇನ್ನು ಹಿಂದೂಸ್ತಾನ್ ಯೂನಿಲಿವರ್ ಮತ್ತು ಭಾರ್ತಿ ಏರ್ ಟೆಲ್ ಸಂಸ್ಥೆಗಳು ಇಂದಿನ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಕಂಡ ಸಂಸ್ಥೆಗಳಾಗಿದ್ದರೆ, ವಿಪ್ರೋ, ಟಿಸಿಎಸ್, ಅಲ್ಟ್ರಾ ಟೆಕ್ ಸಿಮೆಂಟ್ ಸಂಸ್ಥೆಗಳು ನಷ್ಟ ಅನುಭವಿಸಿವೆ.