ಸಂಗ್ರಹ ಚಿತ್ರ 
ವಾಣಿಜ್ಯ

ಎಸ್ ಬಿಐ ವಾಲೆಟ್ ಗ್ರಾಹಕರಿಗೆ ಮಾತ್ರ ಎಟಿಎಂ ವಿತ್ ಡ್ರಾ ಶುಲ್ಕ: ಎಸ್ ಬಿಐ ಸ್ಪಷ್ಟನೆ

ಗ್ರಾಹಕರಿಗೆ ಸ್ಪಷ್ಟನೆ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆ ಇದು ತನ್ನ ಮೊಬೈಲ್ ವ್ಯಾಲೆಟ್ ‘ಸ್ಟೇಟ್ ಬ್ಯಾಂಕ್ ಬಡಿ’ಯ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟನೆ ನೀಡಿದೆ.

ನವದೆಹಲಿ: ಎಟಿಎಂ ಮೂಲಕ ಹಣ ತೆಗೆಯುವ ಪ್ರಕ್ರಿಯೆ ಮೇಲಿನ ಶುಲ್ಕ ಏರಿಕೆ ಸಂಬಂಧ ವ್ಯಾಪಕ ಚರ್ಚೆ ನಡೆದಿರುವಂತೆಯೇ ಇತ್ತ ಗ್ರಾಹಕರಿಗೆ ಸ್ಪಷ್ಟನೆ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆ ಇದು ತನ್ನ ಮೊಬೈಲ್ ವ್ಯಾಲೆಟ್ ‘ಸ್ಟೇಟ್ ಬ್ಯಾಂಕ್ ಬಡಿ’ಯ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟನೆ ನೀಡಿದೆ.

ಎಸ್ ಬಿಐ ವ್ಯಾಲೆಟ್ ‘ಸ್ಟೇಟ್ ಬ್ಯಾಂಕ್ ಬಡಿ’ ಗ್ರಾಹಕರಿಗೆ ಎಟಿಎಂ ಶುಲ್ಕವನ್ನು ಜೂನ್ 1ರಿಂದ ಪ್ರತಿ ವಹಿವಾಟಿಗೆ 25 ರು.ಗೆ ಪರಿಷ್ಕರಿಸಲಾಗಿದೆ ಎಂದು ಎಸ್‌ಬಿಐ ವಕ್ತಾರರು ತಿಳಿಸಿದ್ದಾರೆ. ಇನ್ನು ಉಳಿತಾಯ ಖಾತೆಗೆ ಸಂಬಂಧಿಸಿದಂತೆ ತಿಂಗಳಿಗೆ ನಾಲ್ಕು ಬಾರಿ ಎಟಿಎಂನಿಂದ ಹಣವನ್ನು ಹಿಂದೆಗೆಯುವ ಉಚಿತ ಸೌಲಭ್ಯದ ಮಿತಿ ಬೇಸಿಕ್ ಉಳಿತಾಯ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅವರ ಹೇಳಿದ್ದಾರೆ.

ಇದೇ ವೇಳೆ ದೆಹಲಿ, ಕೋಲ್ಕತಾ, ಚೆನ್ನೈ, ಮುಂಬೈ, ಬೆಂಗಳೂರು, ಹೈದರಾಬಾದ್ ನಂತಹ ಮಹಾನಗರಗಳಲ್ಲಿಯ ಸಾಮಾನ್ಯ ಉಳಿತಾಯ ಖಾತೆದಾರರು ತಿಂಗಳಿಗೆ 8 ಬಾರಿ ಎಟಿಎಂ ಮೂಲಕ ಹಣ ತೆಗೆಯಬಹುದಾದ ಉಚಿತ ಸೌಲಭ್ಯ ಮುಂದುವರಿಯಲಿದ್ದು, ಎಸ್‌ ಬಿಐ ಎಟಿಎಂ ಮೂಲಕ ಐದು ಬಾರಿಯ ಜೊತೆಗೆ ಇತರೆ ಬ್ಯಾಂಕುಗಳ ಎಟಿಎಂಗಳ ಮೂಲಕ ನಡೆಸುವ ಮೂರು ವಹಿವಾಟುಗಳೂ ಇದರಲ್ಲಿ ಸೇರಿವೆ ಎಂದು ತಿಳಿದುಬಂದಿದೆ. ಇತರ ನಗರಗಳಲ್ಲಿ ಈ ಉಚಿತ ಸೌಲಭ್ಯವು ತಿಂಗಳಿಗೆ 10 ವಹಿವಾಟುಗಳಿಗೆ ಸೀಮಿತವಾಗಿದ್ದು, ಎಸ್‌ಬಿಐ ಎಟಿಎಂ ಮೂಲಕ ಐದು ಬಾರಿಯ ಜೊತೆಗೆ ಇತರ ಬ್ಯಾಂಕುಗಳ ಎಟಿಎಂಗಳ ಮೂಲಕ ನಡೆಸುವ ಐದು ವಹಿವಾಟುಗಳೂ ಇದರಲ್ಲಿ ಸೇರಿವೆ. ಆದರೆ ಬ್ಯಾಂಕ್ ಶಾಖೆಗಳ ಮೂಲಕ ಹಣವನ್ನು ಹಿಂದೆಗೆಯುವ ವಹಿವಾಟು ಇದರಲ್ಲಿ ಒಳಗೊಂಡಿಲ್ಲ.

ಇನ್ನು ಬ್ಯಾಂಕಿಂಗ್ ಕರೆಸ್ಪಾಂಡೆಂಟ್‌ ಗಳ ಮೂಲಕ 10,000 ರು.ವರೆಗಿನ ನಗದು ಠೇವಣಿಗೆ ಮೊತ್ತದ ಶೇ.0.25ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಇದು ಕನಿಷ್ಠ 2 ರು. ಮತ್ತು ಗರಿಷ್ಠ 8 ರು.ಆಗಿರುತ್ತದೆ. ಇದರ ಜೊತೆಗೆ ಸೇವಾ ತೆರಿಗೆಯೂ ಅನ್ವಯವಾಗುತ್ತದೆ. ಅಂತೆಯೇ 2000 ರು. ವರೆಗಿನ ನಗದು ವಿತ್ ಡ್ರಾಗೆ ಮೊತ್ತದ ಶೇ.2.50(ಕನಿಷ್ಠ 6 ರು.) ಶುಲ್ಕದ ಜೊತೆಗೆ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ.

ಬೇಸಿಕ್ ಉಳಿತಾಯ ಖಾತೆಗಳಿಗೆ ಚೆಕ್‌ಬುಕ್,ಎಟಿಎಂ ಕಾರ್ಡ್ ವಿತರಣೆ ಮತ್ತು ಹಣ ಹಿಂದೆಗೆತದ ಮೇಲಿನ ಸೇವಾ ಶುಲ್ಕಗಳನ್ನೂ ಪರಿಷ್ಕರಿಸಲಾಗಿದ್ದು, 10 ಚೆಕ್‌ ಗಳಿರುವ ಪುಸ್ತಕಕ್ಕೆ ಗ್ರಾಹಕರು 30 ರು.ಶುಲ್ಕ ಮತ್ತು ಸೇವಾ ತೆರಿಗೆ, 25 ಚೆಕ್‌ ಗಳಿರುವ ಪುಸ್ತಕಕ್ಕೆ 75 ರು.ಶುಲ್ಕ ಮತ್ತು ಸೇವಾ ತೆರಿಗೆ ಹಾಗೂ 50 ಚೆಕ್‌ ಗಳಿರುವ ಪುಸ್ತಕಕ್ಕೆ 150 ರು.ಶುಲ್ಕ ಮತ್ತು ಸೇವಾ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಎಟಿಎಂ ಕಾರ್ಡ್‌ಗಳ ಪೈಕಿ ರುಪೇ ಕ್ಲಾಸಿಕ್ ಕಾರ್ಡ್‌ನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ.

ನೆಟ್ ವರ್ಗಾವಣೆ
ಪರಿಷ್ಕೃತ ಮಾರ್ಗಸೂಚಿಗಳಂತೆ ಎಟಿಎಂ ಮೂಲಕ ಹಣ ಹಿಂದೆಗೆತ ಸೇರಿದಂತೆ ತಿಂಗಳಿಗೆ ನಾಲ್ಕು ಬಾರಿ ಹಣವನ್ನು ಉಚಿತವಾಗಿ ಹಿಂತೆಗೆದುಕೊಳ್ಳಬಹುದು. ಈ ಮಿತಿಯನ್ನು ದಾಟಿದರೆ ಬ್ಯಾಂಕ್ ಶಾಖೆಯಲ್ಲಿ ಪ್ರತಿ ವಹಿವಾಟಿಗೆ 50 ರು.ಸೇವಾಶುಲ್ಕ ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ಇತರ ಬ್ಯಾಂಕುಗಳ ಎಟಿಎಂಗಳ ಮೂಲಕ ಹಣ ಹಿಂದೆಗೆತಕ್ಕೆ ಪ್ರತಿ ವಹಿವಾಟಿಗೆ 20 ರು.ಸೇವಾಶುಲ್ಕ ಮತ್ತು ಸೇವಾ ತೆರಿಗೆ ಮತ್ತು ಎಸ್‌ಬಿಐ ಎಟಿಎಂಗಳ ಮೂಲಕ ಪ್ರತಿ ವಹಿವಾಟಿಗೆ 10 ರು.ಸೇವಾಶುಲ್ಕ ಮತ್ತು ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ.

ಇಂಟರ್ನೆಟ್ ಬ್ಯಾಂಕಿಂಗ್/ಯುಪಿಐ/ಯುಎಸ್‌ಎಸ್‌ಡಿ ಮೂಲಕ ಐಎಂಪಿಎಸ್ ಹಣ ವರ್ಗಾವಣೆ ಶುಲ್ಕ 1ಲಕ್ಷ ರು.ವರೆಗಿನ ಮೊತ್ತಕ್ಕೆ 5 ರು., 1ಲಕ್ಷ ರು.ನಿಂದ ಮೇಲ್ಪಟ್ಟು 2 ಲಕ್ಷರು.ವರೆಗೆ 15 ರು.ಮತ್ತು 2.ಲಕ್ಷರು.ಗಿಂತ ಮೇಲ್ಪಟ್ಟು 5 ಲಕ್ಷರು.ವರೆಗೆ 25 ರು.ಆರುತ್ತದೆ. ಜೊತೆಗೆ ಈ ಎಲ್ಲ ವಹಿವಾಟುಗಳಿಗೆ ಸೇವಾ ತೆರಿಗೆಯನ್ನು ವಿಧಿಸಲಾಗತ್ತದೆ.

ಹಾಳಾದ/ಹರಿದ/ವಿರೂಪಗೊಂಡಿರುವ ನೋಟುಗಳ ಬದಲಾವಣೆಗೂ ಶುಲ್ಕ ನಿಗದಿಪಡಿಸಲಾಗಿದ್ದು. 20 ನೋಟುಗಳು ಮತ್ತು 5,000 ರು.ಮೌಲ್ಯದವರೆಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ. 20 ಕ್ಕಿಂತ ಅಧಿಕ ನೋಟುಗಳಿದ್ದರೆ ಅಷ್ಟೂ ನೋಟುಗಳಿಗೆ ತಲಾ 2 ರು.ಸೇವಾಶುಲ್ಕ ಮತ್ತು ಸೇವಾತೆರಿಗೆಯನ್ನು ವಿಧಿಸಲಾಗುತ್ತದೆ. 5,000 ರು.ಗಿಂತ ಹೆಚ್ಚಿನ ಮೌಲ್ಯದ ನೋಟುಗಳಿಗೆ ತಲಾ 2 ರು. ಅಥವಾ ಪ್ರತಿ ಸಾವಿರಕ್ಕೆ 5 ರು. ಮತ್ತು ಸೇವಾತೆರಿಗೆ... ಒಟ್ಟು ನೋಟುಗಳಿಗೆ ಈ ಪೈಕಿ ಯಾವುದು ಹೆಚ್ಚೋ ಅದನ್ನು ವಿಧಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT