ವಾಣಿಜ್ಯ

ಖಾದಿ ಉದ್ಯಮದಿಂದ ಮುಂದಿನ 5 ವರ್ಷಗಳಲ್ಲಿ 5 ಕೋಟಿ ಜನರಿಗೆ ಉದ್ಯೋಗ: ಗಿರಿರಾಜ್ ಸಿಂಗ್

Srinivas Rao BV
ಮುಂಬೈ: ಮಧ್ಯಮ, ಸಣ್ಣ ಅತಿ ಸಣ್ಣ ಕೈಗಾರಿಕೆಗಳು ಖಾದಿ ಉದ್ಯಮದ ಮೂಲಕ  ಮುಂದಿನ 5 ವರ್ಷಗಳಲ್ಲಿ 5 ಕೋಟಿ ಜನರಿಗೆ ಉದ್ಯೋಗ ನೀಡುವ ಗುರಿ ಹೊಂದಿದೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ. 
ಕೆವಿಐಸಿ (ಖಾದಿ ಹಾಗೂ ಗ್ರಾಮೀಣ ಕೈಗಾರಿಕಾ ಆಯೋಗದಲ್ಲಿ) ಸೋಲಾರ್ ಚಾಲಿತ ಸ್ಪಿನ್ನಿಂಗ್ ವೀಲ್ ಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಮುಂದಿನ 5 ವರ್ಷಗಳಲ್ಲಿ 5 ಕೋಟಿ ಜನರಿಗೆ ಉದ್ಯೋಗ ಸಿಗಲಿದೆ ಎಂದು ಗಿರಿರಾಜ್ ಸಿಂಗ್  ಮಾಧ್ಯಮಗಳಿಗೆ ತಿಳಿಸಿದ್ದಾರೆ. 
ಕಳೆದ ಎರಡು ವರ್ಷಗಳಲ್ಲಿನ ಅವಿರತ ಶ್ರಮದಿಂದ ಖಾದಿ ಉದ್ಯಮದಲ್ಲಿನ ಮಾರಾಟ 35,000 ಕೋಟಿಯಿಂದ 52,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕೆವಿಐಸಿಯನ್ನು ಉತ್ತಮಗೊಳಿಸಲು ಎಂಎಸ್ಎಂಇ ಇಲಾಖೆ ಕ್ರಮ ಕೈಗೊಂಡಿದ್ದು ಹಲವು ಯೋಜನೆಗಳನ್ನು ಉತ್ತೇಜಿಸುತ್ತಿದೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಎಂಎಸ್ಎಂಇ ಇಲಾಖೆ ಖಾದಿ ನೆಟ್ವರ್ಕ್ ನ್ನು ಹೆಚ್ಚಿಸುವ ಬಗ್ಗೆ ಗಂಭೀರವಾದ ಚಿಂತನೆ ನಡೆಸಿದ್ದು, ಇ-ಕಾಮರ್ಸ್ ಸೇಲ್ಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ. 
SCROLL FOR NEXT