ಸಾಂದರ್ಭಿಕ ಚಿತ್ರ 
ವಾಣಿಜ್ಯ

2018ಕ್ಕೆ ಭಾರತದ ಜಿಡಿಪಿ ಶೇ.7.2ರಷ್ಟಾಗಲಿದೆ: ವಿಶ್ವ ಬ್ಯಾಂಕ್ ವರದಿ

ಭಾರತದ ಸಮಗ್ರ ಅಭಿವೃದ್ಧಿ-ಜಿಡಿಪಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 7.2ಕ್ಕೆ ಏರಿಕೆಯಾಗಲಿದ್ದು...

ನವದೆಹಲಿ: ಭಾರತದ ಸಮಗ್ರ ಅಭಿವೃದ್ಧಿ-ಜಿಡಿಪಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 7.2ಕ್ಕೆ ಏರಿಕೆಯಾಗಲಿದ್ದು, 2019-20ರ ವೇಳೆಗೆ ಶೇಕಡ 7.7ಕ್ಕೆ ವೃದ್ಧಿಯಾಗಲಿದೆ ಎಂದು ವಿಶ್ವಬ್ಯಾಂಕ್ ಮುನ್ಸೂಚನೆ ನೀಡಿದೆ.
ಆರ್ಥಿಕ ಕ್ಷೇತ್ರದಲ್ಲಿ ಸುಧಾರಿತ ಹೂಡಿಕೆ, ಸುಧಾರಣೆಯ ಕ್ರಮಗಳು ಮತ್ತು ಬಲವಾದ ಮೂಲಭೂತ ವ್ಯವಸ್ಥೆಗಳುಇದಕ್ಕೆ ಕಾರಣವಾಗಿದೆ ಎಂದು ವಿಶ್ವಬ್ಯಾಂಕ್‍ನ ಭಾರತ ಅಭಿವೃದ್ಧಿ ವರದಿಯಲ್ಲಿ ತಿಳಿಸಿದೆ.ಭಾರತ ದೇಶವು ವಿಶ್ವದಲ್ಲಿ ವೇಗವಾಗಿ ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ಕೂಡ ಇದೇ ಅಭಿವೃದ್ಧಿ ಕಂಡಿದೆ ಎಂದು ವಲ್ರ್ಡ್ ಬ್ಯಾಂಕ್ ಕಂಟ್ರಿ ನಿರ್ದೇಶಕ ಜುನೈದ್ ಅಹಮದ್ ನಿನ್ನೆ
ದೆಹಲಿಯಲ್ಲಿ ಹೇಳಿದರು.
ಕಳೆದ ವರ್ಷ ಭಾರತದ ಜಿಡಿಪಿ ಶೇ. 6.8ರಷ್ಟಿತ್ತು. ಅದು ಇನ್ನೆರಡು ವರ್ಷಗಳಲ್ಲಿ ಶೇ.7.7ರಷ್ಟಾಗಲಿದೆ. ಖಾಸಗಿ ಹೂಡಿಕೆಗಳಲ್ಲಿನ ಮರುಪಡೆಯುವಿಕೆಯಿಂದ ಆರ್ಥಿಕ ದರ ಹೆಚ್ಚಾಗಲಿದೆ ಎಂದರು. ಹಳೆಯ ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆಯಿಂದ ಭಾರತದ ಆರ್ಥಿಕ ಬೆಳವಣಿಗೆಗೆ ಸ್ವಲ್ಪ ತಡೆಯುಂಟಾಗಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಸರ್ಕಾರದ ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆಯಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಇನ್ನಷ್ಟು ಬಲ ತರಲಿದ್ದು, ಸಂಸ್ಥೆಗಳು ಹಾಗೂ ಕಂಪನಿಗಳ ವ್ಯಾಪಾರ ವಹಿವಾಟಿನ ವೆಚ್ಚವನ್ನು ಜಿಎಸ್‍ಟಿ ಕಡಿಮೆ ಮಾಡಲಿದೆ. ರಾಜ್ಯಗಳ ನಡುವೆ ವಸ್ತುಗಳ ಹರಿಯುವಿಕೆಯ ವೆಚ್ಚವನ್ನು ಕೂಡ ತಗ್ಗಿಸಲಿದೆ. ಸರಕು ಮತ್ತು ಸೇವಾ ತೆರಿಗೆಯ ಒಟ್ಟಾರೆ ಪರಿಣಾಮ
ಬಂಡವಾಳ ಮತ್ತು ದೇಶದ ಬಡತನ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ವಿಶ್ವಬ್ಯಾಂಕ್‍ನ ವರದಿ ತಿಳಿಸಿದೆ. 
ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಇಳಿಮುಖವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅಹಮದ್ ಕುಟುಂಬಗಳಲ್ಲಿನ ಸರಾಸರಿ ಆದಾಯ ಹೆಚ್ಚಳದಿಂದ ಮಹಿಳೆಯರು ಮನೆಯಲ್ಲಿಯೇ ಉಳಿಯುವಂತೆ ಮಾಡುತ್ತದೆ.  ಇನ್ನು ಕೃಷಿಯಂತಹ ಕೆಲ ಕೆಲಸಗಳಲ್ಲಿ ಪುರುಷರಿಗೆ ಬದಲಾಗಿ ಮಹಿಳೆಯರನ್ನು ನೇಮಕ ಮಾಡಲು ಸಾಧ್ಯವಾಗುವುದಿಲ್ಲ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT