ವಾಣಿಜ್ಯ

ಡಿ.1 ರಿಂದ ರಿಲಯನ್ಸ್ ಕಮ್ಯೂನಿಕೇಶನ್ ನ 2ಜಿ ಸೇವೆಗಳು ಸ್ಥಗಿತ

Raghavendra Adiga
ನವದೆಹಲಿ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ 2ಜಿ ಕರೆ ಸೇವೆ ಡಿಸೆಂಬರ್ 1ರಿಂದ  ಸ್ಥಗಿತಗೊಳ್ಳಲಿದೆ. 
ಆ ನಂತರದಲ್ಲಿ ಕೇವಲ 4ಜಿ ಸೇವೆಯನ್ನು ಮಾತ್ರವೇ ಒದಗಿಸಲು ಸಂಸ್ಥೆ ನಿರ್ಧರಿಸಿದೆ. ಆ ಪ್ರಕಾರವಾಗಿ ಇದಾಗಲೇ 4ಜಿ ಸೇವೆ ಬಳಸುತ್ತಿರುವ ಗ್ರಾಹಕರಿಗೆ ಯಾವ ತೊಂದರೆಯೂ ಉಂಟಾಗುವುದಿಲ್ಲ. ಆದರೆ 2ಜಿ ಸೇವೆಯನ್ನೇ ಬಳಸುತ್ತಿದ್ದವರು ಇತರ ನೆಟ್‌ವರ್ಕ್‌ ಪೂರೈಕೆದಾರ ಸಂಸ್ಥೆಗೆ ಬದಲಾಯಿಸಿಕೊಳ್ಳಬೇಕೆಂದು ಸಂಸ್ಥೆ ತಿಳಿಸಿದೆ..
ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ರಿಲಯನ್ಸ್ ಗ್ರಾಹಕರು ಇತರ ಸಂಸ್ಥೆಗಳಿಗೆ ಪೋರ್ಟ್ ಆಗಲು ಅರ್ಜಿ ಸಲ್ಲಿಸಿದ್ದರೆ ಅಂತಹಾ ಮನವಿಯನ್ನು ಸ್ವೀಕರಿಸುವಂತೆ ಸೂಚಿಸಿದೆ. ಅದರಂತೆ ರಿಲಯನ್ಸ್‌ ಕಮ್ಯೂನಿಕೇಶನ್ಸ್‌ ಯಾವುದೇ ಗ್ರಾಹಕರ ಪೋರ್ಟ್‌ ಅರ್ಜಿಯನ್ನು ತಿರಸ್ಕರಿಸುವುದಿಲ್ಲ.
ರಿಲಯನ್ಸ್‌ ಕಮ್ಯೂನಿಕೇಶನ್ಸ್‌ ಇದುವರೆಗೂ 2ಜಿ ಮತ್ತು 4ಜಿ ಸೇವೆಗಳನ್ನು ಒದಗಿಸುತ್ತಿದ್ದು ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತಪ್ರದೇಶ, ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ರಿಲಯನ್ಸ್ ಮೊಬೈಲ್ ನೆಟ್ ವರ್ಕ್ ಸೇವೆ ನೀಡುತ್ತಿದೆ. ಒಟ್ಟು 46 ಸಾವಿರ ಕೋಟಿ ರೂ. ನಷ್ಟದಲ್ಲಿರುವ ಸಂಸ್ಥೆಯು ಇತ್ತೀಚೆಗೆ, ಏರ್‌ಸೆಲ್‌ ನ್ನು ಖರೀದಿಸುವ  ಪ್ರಯತ್ನ ನಡೆಸಿತ್ತು. ಆದರೆ ಆ ಪ್ರಯತ್ನದಲ್ಲಿ ಸಂಸ್ಥೆ ಯಶಸ್ವಿಯಾಗಿರಲಿಲ್ಲ.
SCROLL FOR NEXT