ನವದೆಹಲಿ: ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಾರಂಭಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವನೆಯೊಂದಿಗೆ ಮುಂದುವರೆಯುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.
ಆರ್ ಟಿಐ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಆರ್ ಬಿಐ, ಇಸ್ಲಾಮಿಕ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವುದರ ಬಗ್ಗೆ ಆರ್ ಬಿಐ ಹಾಗೂ ಭಾರತ ಸರ್ಕಾರ ಪರಿಶೀಲನೆ ನಡೆಸಿದೆ. ಆದರೆ ಈಗಾಗಲೇ ಇರುವ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಆರ್ಥಿಕ ಸೇವೆಗಳು ಎಲ್ಲಾ ನಾಗರಿಕರಿಗೂ ಲಭ್ಯವಿದ್ದು, ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಾರಂಭಿಸುವ ಪ್ರಸ್ತಾವನೆಯೊಂದಿಗೆ ಮುಂದುವರೆಯದಿರಲು ನಿರ್ಧರಿಸಲಾಗಿದೆ ಎಂದು ಸೆಂಟ್ರಲ್ ಬ್ಯಾಂಕ್ ತಿಳಿಸಿದೆ.
ಭಾರತದಲ್ಲಿ ಇಸ್ಲಾಮಿಕ್ ಬ್ಯಾಂಕಿಂಗ್ ಪ್ರಾರಂಭಿಸುವುದಕ್ಕೆ ಆರ್ ಬಿಐ ಕೈಗೊಂಡಿರುವ ಕ್ರಮಗಳನ್ನು ತಿಳಿಸುವಂತೆ ಆರ್ ಟಿಐ ಸಲ್ಲಿಕೆ ಮಾಡಲಾಗಿತ್ತು. ಇಸ್ಲಾಮಿಕ್ ಬ್ಯಾಂಕಿಂಗ್ ಮುಸ್ಲಿಮರ ವೈಯಕ್ತಿಕ ಕಾನೂನು ಶರಿಯಾದ ಪ್ರಕಾರ ನಡೆಯಲಿದ್ದು, ಇಸ್ಲಾಮ್ ನಲ್ಲಿ ಬಡ್ಡಿ ತೆಗೆದುಕೊಳ್ಳುವುದನ್ನು ಹರಾಮ್ ಪರಿಗಣಿಸಲಾಗಿದ್ದು, ಬಡ್ಡಿ ರಹಿತ ವಹಿವಾಟು ನಡೆಯುವ ವ್ಯವಸ್ಥೆಯಾಗಿದೆ.