ಮುಂಬೈ: ಅಕ್ಟೋಬರ್ 4 ರಂದು ಆರ್ ಬಿಐ ನೂತನ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದು, ಬಡ್ಡಿ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಸ್ಟಮರ್ ಪ್ರೈಸ್ ಇಂಡೆಕ್ಸ್(ಸಿಪಿಐ) ಹಣದುಬ್ಬರ ಆಗಸ್ಟ್ ನಲ್ಲಿ ಶೇ.3.36 ರಷ್ಟಿದ್ದು ಬಡ್ಡಿ ದರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇಲ್ಲ ಎಂಬ ನಿರೀಕ್ಷೆ ಇದೆ. ಕಳೆದ ತಿಂಗಳುಗಳಿಗಿಂತ ಹಣದುಬ್ಬರ ಪ್ರಮಾಣ ಏರಿಕೆಯಾಗಿದ್ದು, ಆರ್ ಬಿಐ ನ ವಿತ್ತೀಯ ನೀತಿ ಸಮಿತಿ ಎದುರು ಹಣದುಬ್ಬರವನ್ನು ಕಡಿಮೆ ಮಾಡುವ ಸವಾಲು ಇದೆ.
ಆಗಸ್ಟ್ ನಲ್ಲಿ ಪ್ರಕಟವಾಗಿದ್ದ ದ್ವೈಮಾಸಿಕ ನೀತಿಯಲ್ಲಿ ಸೆಂಟ್ರಲ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್ ಗಳಿಗೆ ನೀಡಲಾಗುತ್ತಿದ್ದ ಸಾಲದ ಮೇಲಿನ ಬಡ್ಡಿ ದರವನ್ನು 25 ಬಿಪಿಎಸ್ ನಷ್ಟು ಕಡಿಮೆ ಮಾಡಿತ್ತು. ಈಗ ಆರ್ ಬಿಐ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.