ವಾಣಿಜ್ಯ

ಕಪ್ಪು ಹಣದ ವಿರುದ್ಧ ಸಮರ: 5,800 ನಾಮ್ ಕೆ ವಾಸ್ತೆ ಸಂಸ್ಥೆಗಳ ಠೇವಣಿಗಳ ಮೇಲೆ ಸರ್ಕಾರದ ನಿಗಾ

Raghavendra Adiga
ನವದೆಹಲಿ: ಕಪ್ಪು ಹಣದ ವಿರುದ್ಧ ಹೋರಾಟ ತೀವ್ರಗೊಳಿಸಿದ ಸರ್ಕಾರ ಇಂದು 5,800 ನಾಮ್ ಕೆ ವಾಸ್ತೆ ಸಂಸ್ಥೆಗಳ ಬಗ್ಗೆ  ಮಾಹಿತಿಯನ್ನು ಸಂಗ್ರಹಿಸಿದೆ. ನೋಟ್ ಬ್ಯಾನ್ ಆದ ಬಳಿಕ ಈ ಸಂಸ್ಥೆಗಳು 4,574 ಕೋಟಿ ರೂ. ಹೂಡಿಕೆ ಮಾಡಿದ್ದರೆ  4,552 ಕೋಟಿ ರೂ.ವನ್ನು ಹಿಂಪಡೆ(ವಿತ್ ಡ್ರಾ)ದುಕೊಂಡಿವೆ.
ಈ ಸಂಸ್ಥೆಗಳ ಕುರಿತಂತೆ 13 ಪ್ರಮುಖ ಬ್ಯಾಂಕ್ ಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ.ಬ್ಯಾಂಕ್ ಅಕೌಂಟ್ ಗಳ ಕಾರ್ಯಾಚರಣೆ, ಅಪನಗದೀಕರಣದ ಬಳಿಕ ಈ ಸಂದೇಹಾಸ್ಪದ ಸಂಸ್ಥೆಗಳಿಂದ ವರ್ಗಾವಣೆ ಆದ 2,09,032 ರೂ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ತಿಂಗಳು ಸರ್ಕಾರವು 2 ಲಕ್ಷಕ್ಕೂ ಹೆಚ್ಚು 'ನಾಮ್ ಕೆ ವಾಸ್ತೆ' ಕಂಪೆನಿಗಳ ಬ್ಯಾಂಕ್ ಖಾತೆಗಳ ಕಾರ್ಯಾಚರಣೆಗಳಿಗೆ ನಿರ್ಬಂಧಗಳನ್ನು ವಿಧಿಸಿ ಆದೇಶಿದಿತ್ತು.
ಕಪ್ಪು ಹಣ ಮತ್ತು ನಕಲಿ ಸಂಸ್ಥೆಗಳ ವಿರುದ್ಧದ ಹೋರಾಟದಲ್ಲಿ ಇದು "ಪ್ರಮುಖ ಹೆಜ್ಜೆ"ೀಂದಿರುವ ಸರ್ಕಾರ, 2 ಲಕ್ಷದಷ್ಟು ಸಂಖ್ಯೆಯಲ್ಲಿರುವ ಈ ನಾಮ್ ಕೆ ವಾಸ್ತೆ ಸಂಸ್ಥೆಗಳಲ್ಲಿ ಇದೀಗ ಮೊದಲ ಹಂತವಾಗಿ 5,800 ಸಂಸ್ಥೆಗಳ ಮಾಹಿತಿ ದೊರಕಿದೆ ಎಂದಿದೆ.
"ಕೆಲವು ಸಂಸ್ಥೆಗಳು ತಮ್ಮ ಹೆಸರಿನಲ್ಲಿ 100 ಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದು, 2,134 ಖಾತೆಗಳನ್ನು ಹೊಂದಿದ ಸಂಸ್ಥೆ ಸಹ ಇದೆ, ಇತರರು 900 ರಿಂದ 300 ರ ವರೆಗೆ ಖಾತೆಗಳನ್ನು ಹೊಂದಿದ್ದಾರೆ" ಎಂದು ವರದಿಯಲ್ಲಿಹೇಳಿದೆ. ಸಾಲದ ಮೊತ್ತವನ್ನು ಬಿಟ್ಟ ನಂತರ, ಈ ಸಂಸ್ಥೆಗಳು ನವೆಂಬರ್ 8, 2016 ರಂದು 22.05 ಕೋಟಿ ರೂ.ಬಂದವಾಳ ಹೊಂದಿದ್ದವು.
SCROLL FOR NEXT