ಅರುಣ್ ಜೇಟ್ಲಿ 
ವಾಣಿಜ್ಯ

ಉದ್ದಿಮೆ ಸ್ನೇಹಿ ರಾಷ್ಟ್ರ: 30 ಸ್ಥಾನ ಏರಿಕೆ ಕಂಡಿರುವ ಭಾರತಕ್ಕೆ 100ನೇ ಸ್ಥಾನ

ಸುಗಮವಾಗಿ ಉದ್ದಿಮೆ ನಡೆಸಬಹುದಾದ ವಿಶ್ವದ 190 ದೇಶಗಳ ಪಟ್ಟಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 30 ಸ್ಥಾನಗಳಷ್ಟು ಏರಿಕೆ ಕಂಡಿರುವ ಭಾರತವು 100ನೇ ಸ್ಥಾನಕ್ಕೆ...

ವಾಷಿಂಗ್ಟನ್: ಸುಗಮವಾಗಿ ಉದ್ದಿಮೆ ನಡೆಸಬಹುದಾದ ವಿಶ್ವದ 190 ದೇಶಗಳ ಪಟ್ಟಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 30 ಸ್ಥಾನಗಳಷ್ಟು ಏರಿಕೆ ಕಂಡಿರುವ ಭಾರತವು 100ನೇ ಸ್ಥಾನಕ್ಕೆ ಜಿಗಿದಿದೆ. 
ವಿಶ್ವ ಬ್ಯಾಂಕ್ ನೀಡದ ಈಸ್ ಆಫ್ ಡೂಯಿಂಗ್ ಬಿಸಿನೆಸ್ ಇಂಡೆಕ್ಸ್ 2018ರ ಆವೃತ್ತಿ ಪ್ರಕಾರ, ಭಾರತವು ಪ್ರಪಂಚದ ಅಗ್ರ ಹತ್ತು ಸುಧಾರಣೆದಾರರಲ್ಲಿ ಮತ್ತು ಪ್ರಮುಖ ಪ್ರಾದೇಶಿಕ ಸುಧಾರಕನಾಗಿದೆ ಎಂದು ಹೇಳಿದೆ. ಈಸ್ ಆಫ ಡೂಯಿಂಗ್ ಬಿಸಿನೆಸ್ ಶ್ರೇಯಾಂಕದಲ್ಲಿ ಭೂತಾನ್ 75ನೇ ಸ್ಥಾನ ಪಡೆದಿದ್ದರೇ ಭಾರತ 100ನೇ ಸ್ಥಾನ ಪಡೆದಿದೆ. ಇನ್ನು ನೆರೆಯ ರಾಷ್ಟ್ರ ನೇಪಾಳ 105ನೇ ಸ್ಥಾನ ಗಳಿಸಿದೆ. 
ವ್ಯವಸ್ಥೆಯಲ್ಲಿ ಜಾರಿಗೊಳಿಸಿದ ಎಂಟು ಸುಧಾರಣೆಗಳೊಂದಿಗೆ, ಭಾರತವು ನೌಕರರ ಪ್ರಾವಿಡೆಂಟ್ ಫಂಡ್ಗೆ ವಿದ್ಯುನ್ಮಾನವಾಗಿ ಪಾವತಿಸಬೇಕಾದ ಅಗತ್ಯತೆಯಿಂದ ತೆರಿಗೆಗಳನ್ನು ಸುಲಭವಾಗಿ ಪಾವತಿಸಿತ್ತು ಮತ್ತು ಸಾಂಸ್ಥಿಕ ಆದಾಯ ತೆರಿಗೆಗೆ ಅನುಗುಣವಾಗಿ ಸಜ್ಜುಗೊಳಿಸುವ ಆಡಳಿತಾತ್ಮಕ ಕ್ರಮಗಳನ್ನು ಪರಿಚಯಿಸಿದೆ ಎಂದು ವಿಶ್ವ ಬ್ಯಾಂಕ್ ತನ್ನ ಹೇಳಿಕೆ ತಿಳಿಸಿದೆ.
2016-17ರಲ್ಲಿ ಭಾರತ ಸರ್ಕಾರವು ಮಹತ್ವದ ಬದಲಾವಣೆಗಳನ್ನು ಸಹ ಜಾರಿಗೊಳಿಸಿದೆ. ಹೊಸ ಉದ್ಯಮ ಪ್ರಾರಂಭಿಸಲು ಖಾಯಂ ಖಾತೆ ಸಂಖ್ಯೆ(ಪ್ಯಾನ್) ಮತ್ತು ತೆರಿಗೆ ಖಾತೆ ಸಂಖ್ಯೆ(ಟಿಎಎನ್) ಗಾಗಿ ಅರ್ಜಿಗಳನ್ನು ವಿಲೀನಗೊಳಿಸುವುದು ಒಳಗೊಂಡಿದೆ ಎಂದು ವಿಶ್ವ ಬ್ಯಾಂಕ್ ಪ್ರಸ್ತಾಪಿಸಿದೆ. 
ನವದೆಹಲಿ ಮತ್ತು ಬೃಹತ್ ಮುಂಬೈ ಮುನ್ಸಿಪಾಲಿಟಿಯಲ್ಲಿ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಲು ಆನ್ ಲೈನ್ ಸಿಸ್ಟಮ್ ಅನ್ನು ಅನುಷ್ಠಾನಗೊಳಿಸುವ ಮೂಲಕ ಕಟ್ಟಡದ ಪರವಾನಗಿಯನ್ನು ಪಡೆಯಲು ಅಗತ್ಯವಿರುವ ಹಲವಾರು ಕಾರ್ಯವಿಧಾನಗಳು ಮತ್ತು ಸಮಯವನ್ನು ಭಾರತ ಕಡಿಮೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!