ವಾಣಿಜ್ಯ

ರಿಲಯನ್ಸ್ ಕಮ್ಯುನಿಕೇಷನ್ಸ್ ವಿರುದ್ಧ ದಿವಾಳಿತನ ಅರ್ಜಿ ದಾಖಲಿಸಿದೆ ಎರಿಕ್ಸನ್

Raghavendra Adiga
ಮುಂಬಯಿ: ಎರಿಕ್ಸನ್ ಭಾರತೀಯ ಅಂಗಸಂಸ್ಥೆಯು ರಿಲಯನ್ಸ್ ಕಮ್ಯುನಿಕೇಷನ್ಸ್  ಮತ್ತು ಅದರ ಎರಡು ಅಂಗ ಸಂಸ್ಥೆಗಳ ವಿರುದ್ಧ ದಿವಾಳಿತನ ಪ್ರಕರಣ ದಾಕಲಿಸಿದೆ, 
ಎರಿಕ್ಸನ್ ಈಗಾಗಲೇ ಪಾವತಿಸಿದ ಹಣವನ್ನು ಹಿಂತಿರುಗಿಸುವಂತೆ ಕೋರಿ ಭಾರತೀಯ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಅರ್ಜಿ ಸಲ್ಲಿಸಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್  ರಾಷ್ಟ್ರವ್ಯಾಪಿ ಜಾಲವನ್ನು ನಿರ್ವಹಿಸಲು ಸ್ವೀಡೆನ್ ಟೆಲಿಕಾಂ ಉಪಕರಣ ತಯಾರಕ ಸಂಸ್ಥೆ 2014 ರಲ್ಲಿ ಏಳು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು, ಉದೀಗ ಮೂರು ಸಂಸ್ಥೆಗಳಿಂದ ಒಟ್ಟು 11.55 ಶತಕೋಟಿ ರೂ. (180 ಮಿಲಿಯನ್ ಡಾಲರ್) ಹಿಂತಿರುಗಿಸುವಂತೆ ಬೇಡಿಕೆ ಇಟ್ಟಿದೆ ಎಂದು ತಿಳಿದು ಬಂದಿದೆ.
ರಿಲಾಯನ್ಸ್ ಕಮ್ಯುನಿಕೇಷನ್ಸ್ ತನ್ನ ಮೇಲೆ ದಾಕಲಿಸಿದ ದಿವಾಳಿತನ ಪ್ರಕರಣವನ್ನು ಎದುರಿಸಿ ಗೆಲ್ಲಲು ನಿರ್ಧರಿಇಸಿದ್ದು  ಎರಿಕ್ಸನ್ ಪ್ರಕರಣವು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್  ನಲ್ಲಿ ದಾಖಲಾಗಬೇಕಿದೆ, ಸೆ.26 ರಂದು ಈ ಪ್ರಕರಣ ಭಾರತದ ದಿವಾಳಿತನದ ಪ್ರಕರಣಗಳಿಗಾಗಿ ಇರುವ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ ಎಂದು ಹೇಳಲಾಗಿದೆ.
ಒಪ್ಪಂದದಡಿ ಒದಗಿಸಲಾದ ಸೇವೆಗಳಿಗೆ ರಿಲಯನ್ಸ್, ಎರಿಕ್ಸನ್ ಗೆ ಬಾಕಿ ನೀದಬೇಕಿದ್ದು ಪ್ರಕರಣವನ್ನು ಬಗೆಹರಿಸುವ ಸಲುವಾಗಿ ಎರಿಕ್ಸನ್ ಕೊನೆಯ ಅಸ್ತ್ರ ಎನ್ನುವಂತೆ ಈ ರೀತಿ ಮಾಡಿದ್ದಾರೆ.ಈ ಕಾನೂನು ಪ್ರಕ್ರಿಯೆಯು ಮುಂದುವರಿಯಲಿದೆ," ಎಂದು ಸ್ವೀಡಿಷ್ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
SCROLL FOR NEXT