ಜಿಎಸ್ ಟಿ 
ವಾಣಿಜ್ಯ

ಆಗಸ್ಟ್ ನಲ್ಲಿ 90,669 ಕೋಟಿ ಜಿಎಸ್ ಟಿ ಸಂಗ್ರಹ: ಕೇಂದ್ರ ಸರ್ಕಾರ

ಆಗಸ್ಟ್ ತಿಂಗಳಲ್ಲಿ 90,669 ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ನವದೆಹಲಿ: ಆಗಸ್ಟ್ ತಿಂಗಳಲ್ಲಿ 90,669 ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 
ಜಿಎಸ್ ಟಿ ಜಾರಿಯಾದ ಎರಡನೇ ತಿಂಗಳ ತೆರಿಗೆ ಸಂಗ್ರಹದ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, ಈ ಮೊತ್ತ ಪರಿಹಾರ ಯೋಜನೆಯಡಿ ಆಯ್ಕೆ ಮಾಡಿಕೊಂಡ ಮೌಲ್ಯಮಾಪಕರಿಂದ ಪಾವತಿಯಾದ ಜಿಎಸ್ ಟಿ ಮೊತ್ತ 10.24 ಲಕ್ಷಕ್ಕಿಂತ ಹೊರತಾದದ್ದು ಎಂದು ತಿಳಿಸಿದೆ. 
90, 669 ರೂಪಾಯಿಗಳ ಪೈಕಿ ಸೆಂಟ್ರಲ್ ಜಿಎಸ್ ಟಿ(ಸಿಜಿಎಸ್ ಟಿ)ಯಿಂದ 14, 402 ಕೋಟಿ ರೂಪಾಯಿ, ಸ್ಟೇಟ್ ಜಿಎಸ್ ಟಿ ಯಿಂದ 21,067 ಕೋಟಿ ರೂಪಾಯಿ, ಇಂಟಿಗ್ರೇಟೆಡ್ ಜಿಎಸ್ ಟಿ(ಐಜಿಎಸ್ ಟಿ) ಯಿಂದ 47,377 ಕೋಟಿ ರೂಪಾಯಿ ಹಾಗೂ ಐಷಾರಾಮಿ ವಸ್ತುಗಳ ಮೇಲೆ ವಿಧಿಸಲಾಗುವ ಪರಿಹಾರ ಸೆಸ್ ನಿಂದ 7,823 ಕೋಟಿ ರೂಪಾಯಿಯಷ್ಟು ಮೊತ್ತ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 
ಇನ್ನೂ ಕೆಲವರು ಜುಲೈ-ಆಗಸ್ಟ್ ವರೆಗಿನ ತೆರಿಗೆ ಮಾಹಿತಿಯನ್ನು ಸಲ್ಲಿಕೆ ಮಾಡಿಲ್ಲ. ಒಮ್ಮೆ ಅವರು ತೆರಿಗೆ ಮಾಹಿತಿ ಸಲ್ಲಿಕೆ ಮಾಡಿದರೆ ಜಿಎಸ್ ಟಿ ಸಂಗ್ರಹ ಮೊತ್ತ ಇನ್ನೂ ಹೆಚ್ಚಾಗಲಿದೆ ಎಂದು ಸರ್ಕಾರ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ