ನವದೆಹಲಿ : ಮರು ಪಾವತಿಸದ ಸಾಲಗಳಿಗೆ ಸಂಬಂಧಿಸಿದಂತೆ ನಿಯಾಮಾವಳಿ ಪಾಲಿಸದ ಹಿನ್ನೆಲೆಯಲ್ಲಿ ಐಡಿಬಿಐ ಬ್ಯಾಂಕಿನ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಸುಮಾರು 3 ಕೋಟಿ ರೂಪಾಯಿ ದಂಡ ವಿಧಿಸಿದೆ.
ಆದಾಯ ಗುರುತಿಸುವಿಕೆ ಹಾಗೂ ಆಸ್ತಿ ವರ್ಗೀಕರಣ ನಿಯಮಗಳಲ್ಲಿ ನಿರ್ದೇಶನ ಪಾಲಿಸದ ಹಿನ್ನೆಲೆಯಲ್ಲಿ ದಂಡ ವಿಧಿಸಿರುವುದಾಗಿ ಅಧಿಕೃತ ನೋಟಿಸ್ ನಲ್ಲಿ ಆರ್ ಬಿಐ ಹೇಳಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಸೆಕ್ಷನ್ 47( ಎ) (ಸಿ) , 46 (4) ರ ಅಡಿಯಲ್ಲಿ ಈ ದಂಡ ವಿಧಿಸಲಾಗಿದೆ ಎಂದು ಆರ್ ಬಿ ಐ ನೀಡಿರುವ ನೋಟಿಸ್ ನಲ್ಲಿ ತಿಳಿಸಲಾಗಿದೆ.