ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್
ಬೆಂಗಳೂರು: ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಇಂದು ತನ್ನ ಅಂಗಸಂಸ್ಥೆಯಾದ ಪಾನಾಯ- ಇಸ್ರೇಲಿ ಸಂಸ್ಥೆಯನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದೆ.
ಇದು ಇನ್ಫೋಸಿಸ್ ಹಿಂದಿನ ಸಿಇಒ ವಿಶಾಲ್ ಸಿಕ್ಕಾ ಅವರ ನೇತೃತ್ವದ ಸಂಸ್ಥೆಯಾಗಿದ್ದು ಇದರಿಂದಾಗಿ ಸಂಸ್ಥೆಯ ಸ್ಥಾಪಕರು ಹಾಗೂ ಸ್ವಾಧೀನ ಸಂಸ್ಥೆಯ ನಡುವೆ ವಿವಾದಗಳಿಗೆ ಕಾರಣವಾಗಿದೆ.
ಬೆಂಗಳೂರು ಮೂಲದ ಸಾಫ್ಟ್ ವೇರ್ ಸಂಸ್ಥೆಯು ತನ್ನ ಇತರೆ ಅಂಗಸಂಸ್ಥೆಗಲಾದ ಕಲ್ಲಿದುಸ್ ಹಾಗೂ ಸ್ಕಾವಾ ಗಳನ್ನು ಇನ್ನಷ್ಟು ಮುನ್ನಲೆಗೆ ತರಲು ಯೋಜಿಸಿದೆ.
"ಮಾ.31, 2018 ರ ಅಂತ್ಯದಕಾರ್ಯತಂತ್ರದ ಪರಿಶೀಲನೆ ತೀರ್ಮಾನದಂತೆ ಕಂಪನಿಯು ಅದರ ಅಂಗಸಂಸ್ಥೆಗಸಂಭಾವ್ಯ ಖರೀದಿದಾರರ ಗುರುತಿಸುವಿಕೆ ಹಾಗೂ ಮೌಲ್ಯಮಾಪನವನ್ನು ಪ್ರಾರಂಭಿಸಿದೆ. ಕಲ್ಲಿದುಸ್ ಹಾಗೂ ಸ್ಕಾವಾ(ಒಟ್ಟಾಗಿ 'ಸ್ಕವಾ' ಎಂದು ಉಲ್ಲೇಖಿಸಲಾಗಿದೆ), ಪಾನಾಯ (ಒಟ್ಟಾರೆಯಾಗಿ 'ವಿಲೇವಾರಿ ಗುಂಪು' ಎಂದು ಉಲ್ಲೇಖಿಸಲಾಗುತ್ತದೆ), "ಇನ್ಫೊಸಿಸ್ ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಹೇಳಲಾಗಿದೆ.
ಮಾರ್ಚ್ 2019 ರ ವೇಳೆಗೆ ಪನಾಯಾ ಮಾರಾಟ ಪೂರ್ಣಗೊಳ್ಳಲಿದೆ ಎಂದು ಸಂಸ್ಥೆ ನಿರೀಕ್ಷಿಸಿದೆ.
ವಿಲೇವಾರಿ ಗುಂಪಿನ ವಿಷಯದಲ್ಲಿ2,060 ಕೋಟಿ ರೂ. (316 ಮಿಲಿಯನ್ ಅಮೆರಿಕನ್ ಡಾಲರ್), ಸ್ವತ್ತುಗಳು ಹಾಗೂ ರೂ 324 ಕೋಟಿ (50 ಮಿಲಿಯನ್ ಅಮೆರಿಕನ್ ಡಾಲರ್) ಹೊಣೆಗಾರಿಕೆಗಳನ್ನು ಹಿಂಪಡೆಯಲಾಗಿದ್ದು ಸಂಸ್ಥೆಯು 'ಮಾರಾಟಕ್ಕಿದೆ' ಎಂದು ತೋರಿಸಲಾಗಿದೆ" ಇನ್ಫೋಸಿಸ್ ಹೇಳಿಕೆಯಲ್ಲಿ ತಿಳಿಸಿದೆ.
ಪಾನಾಯಕ್ಕೆ ಸಂಬಂಧಿಸಿದಂತೆ ಮಾರ್ಚ್ 31, 2018 ಕ್ಕೆ ಕೊನೆಗೊಂಡ ಕ್ವಾರ್ಟರ್ ಹಾಗೂ ವರ್ಷಾಂತ್ಯದಲ್ಲಿ 118 ಕೋಟಿ ರೂ.(18 ದಶಲಕ್ಷ ಅಮೆರಿಕನ್ ಡಾಲರ್) ನಷ್ಟವನ್ನು ಗುರುತಿಸಲಾಗಿದೆ.