ವಾಣಿಜ್ಯ

ಬ್ಯಾಂಕ್ ಹಗರಣ: ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಗಳ ರಾಷ್ಟ್ರೀಕರಣಕ್ಕೆ ಬ್ಯಾಂಕ್ ನೌಕರರ ಸಂಘ ಒತ್ತಾಯ

Raghavendra Adiga
ಹೈದರಾಬಾದ್: ಸಾಲ ಮಂಜೂರಾತಿಯಲ್ಲಿ ಭ್ರಷ್ಠಾಚಾರ ಹಾಗೂ ಸ್ವಜನ ಪಕ್ಷಪಾತದ ಗಂಭೀರ ಆರೋಪ ಎದುರಿಸುತ್ತಿರುವ ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಗಳನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಅಖಿಲ ಬಾರತೀಯ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಖಾಸಗಿ ವಲಯದ ಬಹುದೊಡ್ಡ ಬ್ಯಾಂಕ್ ಗಳಾದ ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಗಳ ಅಸಲಿಯತ್ತು ಇದೀಗ ಎಲ್ಲರಿಗೂ ಮನವರಿಕೆಯಾಗಿದೆ.ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಚ ವೆಂಕಟಚಾಲಮ್ ಹೇಳದ್ದಾರೆ.
ಈ ಎರದೂ ಬ್ಯಾಂಕ್ ಗಳು ಸುಮಾರು 9 ಲಕ್ಷ ಕೋಟಿ ರೂ. ವರೆಗೆ ಸಾರ್ವಜನಿಕೆ ಠೇವಣಿಗಳನ್ನು ಹೊಂದಿದೆ.ಇದನ್ನು ನಾವು ರಕ್ಷಿಸಬೇಕಿದೆ.ಸರ್ಕಾರವು ಖಾಸಗಿ ಬ್ಯಾಂಕುಗಳಲ್ಲಿ ಉತ್ತಮ ಆಡಳಿತದ ಬಗ್ಗೆ ಮಾತನಾಡುತ್ತಾ  ಐಸಿಐಸಿಐ ಬ್ಯಾಂಕ್ ಅನ್ನು ರೋಲ್ ಮಾಡೆಲ್ ಎಂದು ಗುರುತಿಸುತ್ತಾರೆ. ಆದರೆ ಈಗ ಅದರ ಸ್ಥಿತಿ ಏನಾಗಿದೆ? ಸಾಲಗಳ ಮಂಜೂರಾತಿಯಲ್ಲಿ ಗಂಭೀರ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಆರೋಪಗಳು ಕೇಳಿಬಂದಿದೆ. 
"ಇಂತಹಾ ಅವ್ಯವಹಾರಗಳು ಬಹು ದೀರ್ಘ ಅವಧಿಯವರೆಗೆ ನಡೆಯಲಿದೆ. ಇದಕ್ಕಾಗಿ ಉನ್ನತ ಕಾರ್ಯನಿರ್ವಾಹಕರನ್ನು ಬದಲಿಸುವ ಅಗತ್ಯವಿಲ್ಲ '   ವೆಂಕಟಾಚಲಮ್ ಹೇಳಿದ್ದಾರೆ.
ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಅನ್ನು ರಾಷ್ಟ್ರೀಕರಣಗೊಳಿಸಲು ಸರಕಾರ ಮುಂದೆ ಬರಬೇಕು ಎಂದು ಉನ್ನತ ಮಟ್ಟದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
SCROLL FOR NEXT