ಸಾಂದರ್ಭಿಕ ಚಿತ್ರ 
ವಾಣಿಜ್ಯ

ನಗದು ಬಿಕ್ಕಟ್ಟು: 500 ರು. ಮುಖಬೆಲೆಯ ನೋಟುಗಳ ಮುದ್ರಣ ಐದು ಪಟ್ಟು ಹೆಚ್ಚಳ

ನೋಟು ನಿಷೇಧದ ನಂತರ ದೇಶದ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು,....

ನವದೆಹಲಿ: ನೋಟು ನಿಷೇಧದ ನಂತರ ದೇಶದ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು, ನೋಟುಗಳ ಕೊರತೆ ನೀಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ, 500 ರುಪಾಯಿ ನೋಟುಗಳ ಮುದ್ರಣವನ್ನು ಐದು ಪಟ್ಟು ಹೆಚ್ಚಿಸಲು ನಿರ್ಧರಿಸಿದೆ.
ಸದ್ಯ ದಿನಕ್ಕೆ 500 ನೋಟುಗಳನ್ನು 500 ಕೋಟಿ ರುಪಾಯಿಯಷ್ಟು ಮುದ್ರಣ ಮಾಡಲಾಗುತ್ತಿದೆ. ಇದನ್ನು ಐದು ಪಟ್ಟು ಹೆಚ್ಚಳ ಮಾಡಲಾಗುವುದು ಎಂದು ಆರ್ಥಿಕ ವ್ಯವಹಾರ ಇಲಾಖೆ ಕಾರ್ಯದರ್ಶಿ ಎಸ್.ಸಿ. ಗಾರ್ಗ್‌ ಅವರು ತಿಳಿಸಿದ್ದಾರೆ.
ನೋಟುಗಳ ಕೊರತೆ ನೀಗಿಸಲು ನಾವು ಕೆಲವೊಂದು ಉಪ ಕ್ರಮಗಳನ್ನು ತೆಗೆದುಕೊಂಡಿದೇವೆ. 500 ರುಪಾಯಿ ನೋಟುಗಳ ಮುದ್ರಣ ಐದು ಪಟ್ಟು ಹೆಚ್ಚಳವಾದರೆ ದಿನಕ್ಕೆ 2,500 ಕೋಟಿ ರುಪಾಯಿಷ್ಟು ನೋಟುಗಳು ಮುದ್ರಣವಾಗಲಿವೆ. ಈ ಮೂಲಕ ತಿಂಗಳಿಗೆ 70 ಸಾವಿರದಿಂದ 75 ಸಾವಿರ ಕೋಟಿ ರುಪಾಯಿ ನೋಟುಗಳು ಚಲಾವಣೆಗೆ ಸಿದ್ಧವಾಗಲಿವೆ ಎಂದು ಗಾರ್ಗ್ ಮಾಹಿತಿ ನೀಡಿದ್ದಾರೆ.
ಮುಂದಿನ ಎರಡು ದಿನಗಳಲ್ಲೇ 25 ಸಾವಿರ ನೋಟುಗಳು ಚಲಾವಣೆಗೆ ಬರಲಿವೆ ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ಎಟಿಎಂಗಳಲ್ಲಿ ನೋಟುಗಳೇ ಇಲ್ಲದಂತಾಗಿದೆ. ಎಲ್ಲೆಡೆಯೂ ನೋ ಕ್ಯಾಷ್‌ ಬೋರ್ಡ್‌ ರಾರಾಜಿಸುತ್ತಿದ್ದು, ಹಣಕ್ಕಾಗಿ ಜನ ಪರದಾಡುವಂತಾಗಿದೆ. 
ದೇಶದಲ್ಲಿನ ನಗದು ಬಿಕ್ಕಟ್ಟಿನ ಬಗ್ಗೆ ಪರಾಮರ್ಶೆ ನಡೆಸಲಾಗಿದ್ದು, ದೇಶದಲ್ಲಿ ಸಾಕಷ್ಟು ಕರೆನ್ಸಿ ಚಲಾವಣೆಯಲ್ಲಿದೆ. ಇನ್ನು ತಾತ್ಕಾಲಿಕ ನಗದು ಕೊರತೆ ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್

SCROLL FOR NEXT