ವಾಣಿಜ್ಯ

ಬೆಂಗಳೂರು ದೇಶದಲ್ಲಿ ಅತಿ ಹೆಚ್ಚು ವೇತನ ನೀಡುವ ನಗರ; ಆರೋಗ್ಯ, ಔಷಧ ವಲಯಗಳಲ್ಲಿ ಮನ್ನಣೆ

Sumana Upadhyaya

ನವದೆಹಲಿ: ದೇಶದಲ್ಲಿ ಬೆಂಗಳೂರು ನಗರ ವೃತ್ತಿಪರರಿಗೆ ಅತಿ ಹೆಚ್ಚು ವೇತನ ನೀಡುವ ನಗರವಾಗಿದ್ದು, ಔಷಧವಲಯ ಮತ್ತು ಆರೋಗ್ಯಸೇವೆ ಉದ್ಯಮಗಳು ಪ್ರತಿಭಾವಂತರಿಗೆ ಅತಿ ಹೆಚ್ಚು ವೇತನ ನೀಡುವ ಕ್ಷೇತ್ರಗಳಾಗಿವೆ ಎಂದು ವರದಿಯೊಂದು ಹೇಳುತ್ತದೆ.

ರಾಂಡ್ ಸ್ಟಾಡ್ ಇನ್ಸೈಟ್ ಎಂಬ ರಾಂಡ್ ಸ್ಟಾಡ್ ಇಂಡಿಯಾದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ವರದಿ ಪ್ರಕಾರ, ಕಂಪೆನಿಯ ಸರಾಸರಿ ಮತ್ತು ವಾರ್ಷಿಕ ವೆಚ್ಚ(ಸಿಟಿಸಿ) ಎಲ್ಲಾ ಹಂತಗಳಲ್ಲಿ ಮತ್ತು ಕಾರ್ಯವಿಧಾನಗಳಲ್ಲಿ ಬೆಂಗಳೂರಿನಲ್ಲಿ ವರ್ಷಕ್ಕೆ 10.8 ಲಕ್ಷದಷ್ಟಾಗುತ್ತದೆ.

ಬೆಂಗಳೂರು ನಂತರ ಪುಣೆ 10.3 ಲಕ್ಷ, ಎನ್ ಸಿಆರ್ ಮತ್ತು ಮುಂಬೈ 9.9 ಲಕ್ಷ ಮತ್ತು 9.2 ಲಕ್ಷದಷ್ಟಾಗಿದೆ. ಚೆನ್ನೈ(8 ಲಕ್ಷ), ಹೈದರಾಬಾದ್(7.9 ಲಕ್ಷ), ಕೋಲ್ಕತ್ತಾ(7.2 ಲಕ್ಷ)ಗಳು ವೃತ್ತಿಪರರಿಗೆ ಅತಿ ಹೆಚ್ಚು ವೇತನ ನೀಡುವ ಇತರ ಭಾರತದ ನಗರಗಳಾಗಿವೆ.

ಔಷಧಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವೃತ್ತಿಪರರಿಗೆ ಹೆಚ್ಚಿನ ವೇತನ ಸಿಗುತ್ತದೆ. ಸರಾಸರಿ ವಾರ್ಷಿಕ ವೆಚ್ಚ ತೆಗೆದುಕೊಂಡರೆ 9.6 ಲಕ್ಷದಷ್ಟಾಗುತ್ತದೆ. ಸರಕು ಮತ್ತು ಸೇವಾ ತೆರಿಗೆ ಜಾರಿ ಅನುಷ್ಠಾನ ಮತ್ತು ಅನುವರ್ತನೆ ತಜ್ಞರಿಗೆ ಬೇಡಿಕೆಯನ್ನು ಹೆಚ್ಚಿಸಿದೆ. ಸರಾಸರಿ ವಾರ್ಷಿಕ ವೇತನ 9.4 ಲಕ್ಷದಷ್ಟಾಗಿದೆ.

ಎಫ್ಎಂಸಿಜಿ ದೇಶದಲ್ಲಿ ಮೂರನೇ ಅತಿ ಹೆಚ್ಚು ವೇತನ ನೀಡುವ ಉದ್ಯಮವಾಗಿದ್ದು ಸರಾಸರಿ ವಾರ್ಷಿಕ ವೆಚ್ಚ 9.2 ಲಕ್ಷದಷ್ಟಿದೆ.

ಐಟಿ ವಲಯ ಸರಾಸರಿ ವಾರ್ಷಿಕ ವೇತನ 9.1 ಲಕ್ಷ ನೀಡುವುದಾದರೆ, ಮೂಲಭೂತಸೌಕರ್ಯ, ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ವಲಯಗಳು 9 ಲಕ್ಷ ಸರಾಸರಿ ವಾರ್ಷಿಕ ವೇತನ ನೀಡಿ ಭಾರತದಲ್ಲಿ ವೃತ್ತಿಪರರಿಗೆ ಅತಿ ಹೆಚ್ಚು ವೇತನ ನೀಡುವ ಉದ್ಯಮಗಳಲ್ಲಿ ನಾಲ್ಕು ಮತ್ತು ಐದನೇ ಸ್ಥಾನ ಗಳಿಸಿವೆ.

ಇನ್ನು ಯಾವುದೇ ಕ್ಷೇತ್ರದಲ್ಲಿ 6ರಿಂದ 10 ವರ್ಷಗಳ ಅನುಭವ ಹೊಂದಿದವರಿಗೆ ವೇತನ ದುಪ್ಪಟ್ಟು ಏರಿಕೆಯಾಗಲಿದೆ. ರಾಂಡ್ ಸ್ಟಾಡ್ ಇನ್ಸೈಟ್ ವೇತನ ಟ್ರೆಂಡ್ ವರದಿ ದೇಶಾದ್ಯಂತ 20 ಉದ್ಯಮಗಳ 15ಕ್ಕೂ ಹೆಚ್ಚು ಕಾರ್ಯಶೈಲಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ವಿಶ್ಲೇಶಿಸಿದೆ.

SCROLL FOR NEXT