ಭಾರತದ ಮೊದಲ 100 ಶತಕೋಟಿ ಡಾಲರ್ ಸಂಸ್ಥೆಯಾಗಿ ಟಿಸಿಎಸ್ 
ವಾಣಿಜ್ಯ

ಭಾರತದ ಮೊದಲ 100 ಶತಕೋಟಿ ಡಾಲರ್ ಸಂಸ್ಥೆಯಾಗಿ ಟಿಸಿಎಸ್

ಭಾರತದ ಮೊದಲ 100 ಬಿಲಿಯನ್ ಡಾಲರ್ ಸಂಸ್ಥೆ ಎನ್ನುವ ಕೀರ್ತಿಗೆ ದೇಶದ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಪಾತ್ರವಾಗಿದೆ.

ನವದೆಹಲಿ: ಭಾರತದ ಮೊದಲ 100 ಬಿಲಿಯನ್ ಡಾಲರ್ ಸಂಸ್ಥೆ ಎನ್ನುವ ಕೀರ್ತಿಗೆ  ದೇಶದ ಐಟಿ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)  ಪಾತ್ರವಾಗಿದೆ.
ಸೋಮವಾರ  ಬೆಳಿಗ್ಗೆ 9.49ಕ್ಕೆ ಸಂಸ್ಥೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯ 6,62,726.36 ಕೋಟಿ ರೂ. ಗೆ ತಲುಪುವ ಮುಖೇನ ಟಿಸಿಎಸ್ ಈ ದಾಖಲೆ ಮಾಡಿದೆ.
ಟಾಟಾ ಸಮೂಹದ ಮುಖ್ಯಸ್ಥರಾದ ಎನ್ ಚಂದ್ರಶೇಖರನ್ ಮಾತನಾಡಿ "ಸಂಸ್ಥೆಯ ಪಾಲಿಗಿದು ವಿಶೇಷ ಕ್ಷಣವಾಗಿದೆ. ಇದಕ್ಕಾಗಿ ನಾವು ಸಾಕಷ್ಟು ಸಮಯದಿಂದ ಎದುರು ನೋಡುತ್ತಿದ್ದೆವು. ಮುಂಬರುವ ತಿಂಗಳಿನಲ್ಲಿ ನಾವು ಉತ್ತಮ ತ್ರೈಮಾಸಿಕ ಬೆಳವಣಿಗೆ ದಾಖಲಿಸುವ ವಿಶ್ವಾಸವಿದೆ" ಎಂದರು.
ಐವತ್ತು ವರ್ಷಗಳ ಇತಿಹಾಸವಿರುವ ಟಿಸಿಎಸ್ ಇತ್ತೀಚೆಗೆ ಕಳೆದ ವರ್ಷ ಜನವರಿ-ಮಾರ್ಚ್ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು ಆ ವರದಿಯಲ್ಲಿನ ಅಂಶಗಳು ಹೂಡಿಕೆದಾರರಲ್ಲಿ ಉತ್ಸಾಹ ಮೂಡಿಸಿದ್ದವು. ಇದೇ ಕಾರಣದಿಂದ ಸಂಸ್ಥೆಯ ಮಾರುಕಟ್ಟೆ ಮೌಲ್ಯ ಒಮ್ಮೆಲೇ ಏರಿಕೆ ಕಂಡಿದೆ.
ರಾಷ್ಟ್ರದ ಪ್ರಥಮ 100 ಬಿಲಿಯನ್ ಡಾಲರ್ ಆಗಿ ಹೊರಹೊಮ್ಮಿದ ಈ ಸಂಸ್ಥೆಯ ಸಾಧನೆ ಗಮನಾರ್ಹವಾದದ್ದು  ಟಿಸಿಎಸ್ ನ ಈ ದಾಖಲೆ ಸರಿಗಟ್ಟುವುದು ಸಧ್ಯದ ಮಟ್ಟಿಗೆ ಭಾರತದ ಇತರೆ ಸಂಸ್ಥೆಗಳಿಗೆ ಕ್ಠಿಣವಾಗಿದೆ. ಟಿಸಿಎಸ್ ನ ಪ್ರಮುಖ ಎದುರಾಳಿ ಇನ್ಫೋಸಿಸ್ ಸಂಸ್ಥೆಯ ಒಟ್ಟು ಮೌಲ್ಯ38 ಬಿಲಿಯನ್ ಡಾಲರ್ ಅಷ್ಟಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್