ವಾಣಿಜ್ಯ

ಡಾಟಾ ಸೋರಿಕೆ ಹರಗರಣವಾದ್ರೂ ಇಳಿದಿಲ್ಲ ಫೇಸ್ ಬುಕ್ ನ ಲಾಭ!

Srinivas Rao BV
ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ನ ಲಾಭ ಕಳೆದ ತ್ರೈಮಾಸಿಕದಲ್ಲಿ ಏರಿಕೆ ಕಂಡಿದ್ದು, ಬಳಕೆದಾರರ ಸಂಖ್ಯೆಯೂ ಏರಿಕೆಯಾಗಿದೆ. 
ಇತ್ತೀಚೆಗಷ್ಟೇ ಬಳಕೆದಾರರ ವೈಯಕ್ತಿಕ ವಿವರಗಳ ಸೋರಿಕೆ ಆರೋಪ ಕೇಳಿಬಂದಿದ್ದರೂ ಫೇಸ್ ಬುಕ್ ನ ಜಾಹಿರಾತು ಬೆಳವಣಿಗೆ, ಬಳಕೆದಾರರ ಸಂಖ್ಯೆಯ ಬೆಳವಣಿಗೆಗೆ ಅದು ಪರಿಣಾಮ ಬೀರಿಲ್ಲ. 2018 ರ ಮೊದಲ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕಿಂತ ಶೇ. 63 ಕ್ಕೆ (5 ಬಿಲಿಯನ್) ಏರಿಕೆಯಾಗಿದೆ. 
ಒಟ್ಟಾರೆ ಆದಾಯದಲ್ಲಿ ಶೇ.49 ರಷ್ಟು ಏರಿಕೆಯಾಗಿದ್ದು, 11.97 ಬಿಲಿಯನ್ ಏರಿಕೆ ಕಂಡಿದೆ ಎಂದು ಫೇಸ್ ಬುಕ್ ಸಂಸ್ಥೆ ಹೇಳಿದೆ. ಡಾಟಾ ಸೋರಿಕೆ ಹಗರಣದ ಬಳಿಕ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹೂಡಿಕೆದಾರರಲ್ಲಿ ಧೈರ್ಯ ತುಂಬಿದ್ದರು, ವರ್ಷದ ಪ್ರಾರಂಭದಲ್ಲೇ ಹೆಚ್ಚು ಸವಾಲುಗಳು ಎದುರಾದರೂ ಫೇಸ್ ಬುಕ್ ಉದ್ಯಮ ಉತ್ತಮವಾಗಿದೆ ಎಂದು ಜುಕರ್ಬರ್ಗ್ ಹೇಳಿದ್ದಾರೆ. 
SCROLL FOR NEXT