ಮುಂಬೈ: ಕಳೆದರೆಡು ವಾರಗಳಿಂದ ಏರುಗತಿಯಲ್ಲಿ ಸಾಗಿರುವ ಭಾರತೀಯ ಷೇರುಮಾರುಕಟ್ಟೆ ಮತ್ತೆ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದು, ಸೆನ್ಸೆಕ್ಸ್ 37, 778 ಅಂಕಗಳಿಗೆ ಏರಿಕೆಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದೆ.
ಷೇರುಮಾರುಕಟ್ಟೆಯಲ್ಲಿ ಗೂಳಿ ಆರ್ಭಟ ಮತ್ತೆ ಮುಂದುವರೆದಿದ್ದು, ಸೆನ್ಸೆಕ್ಸ್ ದಾಖಲೆಯ 222.03ಅಂಕಗಳ ಏರಿಕೆಯೊಂದಿಗೆ 37,778 ಅಂಕಗಳೊಂದಿಗೆ ವಾರದ ವಹಿವಾಟು ಆರಂಭಿಸಿದೆ. ಭಾರತೀಯ ಷೇರುಮಾರುಕಟ್ಟೆ ಇತಿಹಾಸದಲ್ಲೇ ಇದು ಸಾರ್ವಕಾಲಿಕ ಗರಿಷ್ಠ ಅಂಕಗಳ ವಹಿವಾಟು ಆರಂಭವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಂತೆಯೇ ನಿಫ್ಟಿ ಕೂಡ 38 ಅಂಕಗಳ ಏರಿಕೆಯೊಂದಿಗೆ 11, 400 ಅಂಕಗಳ ಗಡಿ ದಾಟಿದೆ. ವಾರದ ವಹಿವಾಟು ಆರಂಭದಲ್ಲೇ ಭಾರತೀಯ ಷೇರುಮಾರುಕಟ್ಟೆ ತನ್ನ ಅಂಕಗಳನ್ನು ಏರಿಕೆ ಮಾಡಿಕೊಂಡಿದೆ.