ವಾಣಿಜ್ಯ

ಹೈದರಾಬಾದ್: ಭಾರತದಲ್ಲಿ ಐಕೆಇಎ ಮೊದಲ ರಿಟೇಲ್ ಮಳಿಗೆ ಪ್ರಾರಂಭ

Raghavendra Adiga
ಹೈದರಾಬಾದ್: ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅನುಮೋದನೆ ಪಡೆದ ಐದು ವರ್ಷದ ನಂತರ  ಸ್ವೀಡಿಷ್ ಸಂಸ್ಥೆ ಐಕೆಇಎ ಹೈದರಾಬಾದ್ ನಲ್ಲಿ ತನ್ನ ಮೊದಲ ಮಳಿಗೆಯನ್ನು ಪ್ರಾರಂಭಿಸಿದೆ.
ಹೈದರಾಬಾದ್ ನಲ್ಲಿ ಪ್ರಾರಂಭಗೊಂಡ ಮಳಿಗೆಯು 950 ಮಂದಿಗೆ ನೇರವಾಗಿ, ಮತ್ತು 1,500 ಜನರಿಗೆ ಪರೋಕ್ಷವಾಗಿ ಉದ್ಯೋಗ ಒದಗಿಸಲಿದೆ. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆಯಲು ಯೋಜಿಸಿರುವ ಸಂಸ್ಥೆ 15,000 ಮಂದಿಯನ್ನು ನೇಮಕ ಮಾಡಿಕೊಳ್ಳಲು ಮುಂದಾಗಲಿದೆ ಎಂದು ಐಕೆಇಎ  ಗ್ರೂಪ್ ಸಿಇಒ ಜೆಸ್ಪರ್ ಬ್ರೊಡಿನ್ ಹೇಳಿದ್ದಾರೆ,
"ನಾವು ಭಾರತದೊಂದಿಗೆ ದೀರ್ಘಕಾಲದ ಬದ್ದತೆ ಹೊಂದಿದ್ದೇವೆ. ಅದು ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ," ಅವರು ಹೇಳಿದರು. 2025 ರ ಹೊತ್ತಿಗೆ ಭಾರತದಲ್ಲಿ 25 ಮಳಿಗೆಗಳ ಸ್ಥಾಪನೆಗೆ ಯೋಜನೆ ರೂಪಿಸಿರುವುದಾಗಿ ಹೇಳಿರುವ ಸಂಸ್ಥೆ 2013 ರಲ್ಲಿ,ಕೇಂದ್ರ ಸರ್ಕಾರದಿಂದ ರಾಷ್ಟ್ರದಲ್ಲಿ 10,500 ಕೋಟಿ ರೂ. ಹೂಡಿಕೆಯ ಏಕೈಕ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರಕ್ಕೆ ಅನುಮತಿ ಪಡೆದಿತ್ತು.
SCROLL FOR NEXT