ವಾಣಿಜ್ಯ

2025ರ ವೇಳೆಗೆ ಪವರ್ ಬ್ಯಾಂಕ್ ಉದ್ಯಮದಲ್ಲಿ 18 ಸಾವಿರ ಕೋಟಿ ರು. ಹೂಡಿಕೆ, 80 ಸಾವಿರ ಉದ್ಯೋಗ ಸೃಷ್ಟಿ ಸಾಧ್ಯತೆ

Lingaraj Badiger
ನವದೆಹಲಿ: ಸರಿಯಾದ ನಿಯಮಗಳನ್ನು ಜಾರಿಗೊಳಿಸಿದರೆ ಭಾರತದಲ್ಲಿ 2025ರ ವೇಳೆಗೆ ಪವರ್ ಬ್ಯಾಂಕ್ ಗಳ ಉದ್ಯಮವೂ ಒಂಬತ್ತು ಪಟ್ಟು ಬೆಳೆಯಲಿದ್ದು, 18 ಸಾವಿರ ಕೋಟಿ ರುಪಾಯಿ ಹೂಡಿಕೆಯಾಗುವ ಸಾಧ್ಯತೆ ಇದೆ ಮತ್ತು 80 ಸಾವಿರ ಉದ್ಯೋಗ ಸೃಷ್ಟಿಸಲಿದೆ ಎಂದು ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್(ಐಸಿಇಎ) ಹೇಳಿದೆ.
ಪವರ್ ಬ್ಯಾಂಕ್ ಗಳನ್ನು ಹಂತ ಹಂತವಾಗಿ ನಿರ್ಮಾಣ ಯೋಜನೆ ಅಡಿ ತರಬೇಕು. ಹಾಗ ಆಮದು ಮಾಡಿಕೊಳ್ಳುವ ಪವರ್ ಬ್ಯಾಂಕ್ ಗಳ ಮೇಲೆ ಅಂಬಕಾರಿ ತೆರಿಗೆ ವಿಧಿಸಬಹುದು ಎಂದು ಐಸಿಇಎ ತಿಳಿಸಿದೆ.
ಪವರ್ ನಿರ್ಮಾಣಕ್ಕೆ ಸಂಬಂಧಿದಂತೆ ಸರಿಯಾದ ನಿಯಮಗಳನ್ನು ಜಾರಿಗೊಳಿಸಿದರೆ ರಫ್ತು ಪ್ರಮಾಣ ಸಹ 5,800 ಕೋಟಿಗೆ ತಲುಪಲಿದೆ ಎಂದು ಐಸಿಇಎ ಅಧ್ಯಕ್ಷ ಪಂಕಜ್ ಮೋಹಿಂದ್ರೂ ಅವರು ಹೇಳಿದ್ದಾರೆ.
ಮೊಬೈಲ್ ಫೋನ್ ಮತ್ತು ಬಿಡಿಭಾಗಗಳ ಸಂಸ್ಥೆಯ ಪ್ರಕಾರ, ಭಾರತಕ್ಕೆ ಪ್ರತಿ ವರ್ಷ ಸುಮಾರು 2 ಸಾವಿರ ಕೋಟಿ ರುಪಾಯಿ ಮೌಲ್ಯದ 33 ಮಿಲಿಯನ್ ಪವರ್ ಬ್ಯಾಂಕ್ ಗಳ ಅಗತ್ಯ ಇದೆ. ಸದ್ಯ ಬಹುತೇಕ ಪವರ್ ಬ್ಯಾಂಕ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಮೋಹಿಂದ್ರೂ ಅವರು ತಿಳಿಸಿದ್ದಾರೆ.
SCROLL FOR NEXT