ಟ್ವಿಟ್ಟರ್ ತ್ರೈಮಾಸಿಕ ವರದಿ: ಲಾಭಗಳಿಕೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಸಾಮಾಜಿಕ ತಾಣ
ವಾಷಿಂಗ್ ಟನ್: ಜನಪ್ರಿಯ ಸಾಮಾಜಿಕ ತಾಣ ಟ್ವಿಟ್ಟರ್ ಇದೇ ಮೊದಲ ಬಾರಿಗೆ ತ್ರೈಮಾಸಿಕ ಲಾಭ ಗಳಿಸಿಕೊಂಡಿರುವುದಾಗಿ ಪ್ರಕಟಣೆ ತಿಳಿಸಿದೆ. ನಾಲ್ಕನೇ ತ್ರೈಮಾಸಿಕದಲ್ಲಿ 91 ಮಿಲಿಯನ್ ಡಾಲರ್ ಗಳಿಕೆಯಾಗಿದ್ದು, 2013ರ ತರುವಾಯ ಸಂಸ್ಥೆಗೆ ದೊರಕಿದ ಮೊದಲ ಧನಾತ್ಮಕ ನಿವ್ವಳ ಆದಾಯ ಇದೆಂದು ಸ್ಯಾನ್ ಫ್ರಾನಿಸ್ಸ್ಕೋ ಮೂಲದ ಸಂಸ್ಥೆ ಹೇಳಿದೆ.
ಟ್ವಿಟರ್ ಷೇರುಗಳು 12 ಪ್ರತಿಶತದಷ್ಟು ಏರಿಕೆ ಕಂಡಿದ್ದು 30.18 ಡಾಲರ್ ತಲುಪಿದೆ. ಇದು ವರ್ಷದಲ್ಲಿ ಸಂಸ್ಥೆಗೆ ದೊರಕಿದ ಗರಿಷ್ಟ ಆದಾಯವಾಗಿದೆ. ಪ್ರಮುಖ ಸ್ಟಾಕ್ ಗಳ ಜಕುಸಿತದ ಹೊರತಾಗಿಯೂ ಸಂಸ್ಥೆ ಶೇ.26ರಷ್ಟು ಲಾಭ ಗಳಿಸಿದೆ. ಟ್ವಿಟ್ಟರ್ ಆದಾಯವು ಒಂದು ವರ್ಷದ ಹಿಂದೆ ಎರಡು ಶೇಕಡ ಏರಿಕೆಯಾಗಿದ್ದು, ನಿರೀಕ್ಷಿತ 732 ಮಿಲಿಯನ್ ಡಾಲರ್ ಗಿಂತ ಹೆಚ್ಚಾಗಿದೆ.
ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 330 ಮಿಲಿಯನ್ ಆಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ ಸಹ ಇದೇ ಪ್ರಮಾಣದ ಬಳಕೆದಾರರ ಸಂಖ್ಯೆಯನ್ನು ಟ್ವಿತ್ಟರ್ ಹೊಂದಿತ್ತು. ಈ ಲಾಭಗಳಿಕೆಯು ಟ್ವಿಟ್ಟರ್ ಗೆ ಒಂದು ಪ್ರಮುಖ ಸಾಧನೆಯಾಗಿದ್ದು,ಇದು ಕೆಲ ತಿಂಗಳುಗಳಿಂದ ನಿರಂತರವಾಗಿ ಹಣ ಕಳೆದುಕೊಳ್ಳುತ್ತಿದ್ದ ಸಂಸ್ಥೆಗೆ ಬಹುದೊಡ್ಡ ಪುಟಿದೇಳುವಿಕೆ ಎನ್ನಿಸಿದೆ.
"ವರ್ಷವೊದರ ಮುಕ್ತಾಯಕ್ಕೆ ನಮಗೆ ಬಲ ಸಿಕ್ಕಿದೆ. 2017 ರಲ್ಲಿ ನಾವು ಸಾಧಿಸಿದ ಸ್ಥಿರ ಪ್ರಗತಿಯ ಬಗ್ಗೆ ಹೆಮ್ಮೆಯಿದೆ, ಮತ್ತು ಮುಂದೆ ನಮ್ಮ ಭವಿಷ್ಯದ ಬಗೆಗೆ ವಿಶ್ವಾಸವಿದೆ." ಟ್ವಿಟ್ಟರ್ ತ್ರೈಮಾಸಿಕ ಲಾಭದ ವಿಚಾರವಾಗಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಜ್ಯಾಕ್ ಡಾರ್ಸೆ ಹೇಳಿದ್ದಾರೆ.
ಪ್ರಸಿದ್ದ ವ್ಯಕ್ತಿಗಳು, ರಾಜಕಾರಣಿಗಳು, ಪತ್ರಕರ್ತರು ಹೆಚ್ಚಾಗಿ ಟ್ವಿತ್ಟರ್ ಬಳಸುತ್ತಾರೆ, ಆದರೆ ಪೇಸ್ ಬುಕ್ ನಂತಹಾ ವಿಶಾಲ ವೇದಿಕೆಯ ಸಾಮಾಜಿಕ ತಾಣಗಳಿಗೆ ಹೋಲಿಸಿದಾಗ ಟ್ವಿಟ್ಟ್ರ್ ಗೆ ಸಾಕಷ್ಟು ನಿರ್ಬಂಧವಿರುವುದು ಕಾಣುತ್ತೇವೆ. ಇನ್ನು ಜಾಹೀರಾತು ಆದಾಯದಲ್ಲಿಯೂ ಟ್ವಿಟ್ಟರ್ ಸಾಕಷ್ಟು ಹಿಂದೆ ಇದೆ ಎಂದೆನ್ನುವುದು ಸುಳ್ಳಲ್ಲ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos