ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ಹಾರ್ಲೆ ಡೇವಿಡ್ಸನ್ ಆಮದು ಸುಂಕ: ಭಾರತದ ವಿರುದ್ಧ ಡೊನಾಲ್ಡ್ ಟ್ರಂಪ್ ಕಿಡಿ

ಅಮೆರಿಕ ಮೂಲದ ಹಾರ್ಲೆ ಡೇವಿಡ್ಸನ್ ಬೈಕ್ ಮೇಲೆ ಭಾರತ ಹೇರಿರುವ ದುಬಾರಿ ಆಮದು ಸುಂಕಕ್ಕೆ ಸಂಬಂಧಿಸಿದಂತೆ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

ಸಂಗ್ರಹ ಚಿತ್ರ
Srinivasa Murthy VN
Updated On : 14 Feb 2018, 11:30 am
ನವದೆಹಲಿ: ಅಮೆರಿಕ ಮೂಲದ ಹಾರ್ಲೆ ಡೇವಿಡ್ಸನ್ ಬೈಕ್  ಮೇಲೆ ಭಾರತ ಹೇರಿರುವ ದುಬಾರಿ ಆಮದು ಸುಂಕಕ್ಕೆ ಸಂಬಂಧಿಸಿದಂತೆ ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.
ಅಮೆರಿಕ ಕಾಂಗ್ರೆಸ್ ಸಭೆಯಲ್ಲಿ ಉಕ್ಕಿನ ಉದ್ಯಮದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಡೊನಾಲ್ಡ್ ಟ್ರಂಪ್ ಈ ವೇಳೆ ಬೈಕ್ ಮೇಲೆ ಆಮದು ಸುಂಕ ಏರಿಕೆ ಮಾಡಿರುವ ವಿವಿಧ ದೇಶಗಳ ವಿರುದ್ಧ ಕಿಡಿಕಾರಿದರು. ಇತ್ತೀಚೆಗಷ್ಟೇ  ಕೇಂದ್ರ ಸರ್ಕಾರ ವಿದೇಶಿ ಬೈಕ್ ಗಳ ಮೇಲಿನ ಆಮದು ಸುಂಕವನ್ನು ಶೇ.50ಕ್ಕೆ ಇಳಿಖೆ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಬೈಕ್ ಗಳ ಮೇಲೆ ವಿವಿಧ ದೇಶಗಳು ವಿಧಿಸಿರುವ  ಆಮದು ಸಂಕ ಅನ್ಯಾಯದ ನಿರ್ಧಾರವಾಗಿದೆ. ಅಮೆರಿಕದಲ್ಲಿ ವಿದೇಶಿ ಬೈಕ್ ಗಳಿಗೆ ಶೂನ್ಯ ಆಮದು ಸುಂಕವಿದ್ದು, ಇದೇ ರೀತಿ ಮೆದು ಧೋರಣೆಯನ್ನು ಇತರೆ ದೇಶಗಳೂ ಅನುಕರಿಸಬೇಕು ಎಂದು ಹೇಳಿದರು.
ವಿದೇಶಗಳಲ್ಲಿ ಮಾರಾಟವಾಗುವ ನಮ್ಮ ದೇಶದ ಬೈಕ್ ಗಳಿಗೆ ನಾವು ದುಬಾರಿ ಶುಲ್ಕವನ್ನು ತೆರುತ್ತಿದ್ದೇವೆ. ಈ ದೇಶಗಳ ಹೆಸರು ಹೇಳಲು  ಇಚ್ಛಿಸುವುದಿಲ್ಲ. ಆದರೆ ಈ ಪಟ್ಟಿಯಲ್ಲಿ ಭಾರತ ಕೂಡ ಸೇರಿರಬಹುದು. ಪ್ರಧಾನಿ ನರೇಂದ್ರ  ಮೋದಿ ಅವರಿಗೆ ಕರೆ ಮಾಡಿದ್ದಾಗ ಅವರು ಹಾರ್ಲೆ ಡೇವಿಡ್ಸನ್ ಬೈಕ್ ನ ಆಮದು ಸುಂಕವನ್ನು ಶೇ.75ರಿಂದ ಶೇ.50ಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಿದರು. ಆದರೆ ನನ್ನ ಅಭಿಪ್ರಾಯದಂತೆ ಈ ಪ್ರಮಾಣ ಇನ್ನೂ ಕಡಿತ  ಮಾಡಬಹುದಾಗಿತ್ತು. ಅಮೆರಿಕಕ್ಕೆ ಬರುವ ವಿದೇಶಿ ಬೈಕ್ ಗಳ ಮೇಲಿನ ಆಮದು ಸುಂಕ ಎಷ್ಟು ಗೊತ್ತೆ..? ಶೂನ್ಯ.. ಅಮೆರಿಕದಲ್ಲಿ ಕೆಲ ವಿದೇಶಿ ಬೈಕ್ ಗಳ ಮೇಲೆ ಯಾವುದೇ ರೀತಿಯ ಸುಂಕ ವಿಧಿಸುತ್ತಿಲ್ಲ. ಇಂತಹುದೇ  ನಿರ್ಧಾರಗಳನ್ನು ಅಮೆರಿಕದ ವಾಣಿಜ್ಯ ಮಿತ್ರ ರಾಷ್ಟ್ರಗಳೂ ಕೈಗೊಳ್ಳಬೇಕು ಎಂದು ಟ್ರಂಪ್ ಆಗ್ರಹಿಸಿದರು.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments